ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ನ.12): ಜೆ.ಸಿ.ಆರ್.ಸಾಂಸ್ಕೃತಿಕ ಯುವಕ ಸಂಘದ ವತಿಯಿಂದ ನಗರದ ಜೆಸಿಆರ್.ಸರ್ಕಲ್‍ನಲ್ಲಿ ಶನಿವಾರ 67 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಜೆ.ಸಿ.ಆರ್.ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಜಿ.ಎನ್.ಮಲ್ಲಿಕಾರ್ಜುನಪ್ಪ ಕನ್ನಡ ಧ್ವಜ ಹಾರಿಸಿ ಮಾತನಾಡುತ್ತ ಕರ್ನಾಟಕ ಏಕೀಕರಣಕ್ಕಾಗಿ ಅನೇಕ ಹಿರಿಯರು ಹೋರಾಡಿ ಪ್ರಾಣ ತ್ಯಾಗ ಮಾಡಿದ ಫಲವಾಗಿ ಇಂದು ನಾಡಿನಾದ್ಯಂತ ಎಲ್ಲಡೆ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಮೀಸಲುಗೊಳಿಸದೆ ನಿತ್ಯೋತ್ಸವವಾಗಿ ಆಚರಿಸಿಬೇಕು ಎಂದು ಹೇಳಿದರು.
ಜೆ.ಸಿ.ಆರ್.ಸಾಂಸ್ಕೃತಿಕ ಯುವಕ ಸಂಘದ ಕಾರ್ಯದರ್ಶಿ ನವೀನ್ ಚಾಲುಕ್ಯ ಮಾತನಾಡುತ್ತ ಕನ್ನಡ, ನಾಡು, ನುಡಿ, ನೆಲ, ಜಲದ ಬಗ್ಗೆ ಎಲ್ಲರೂ ಅಭಿಮಾನ ಮೂಡಿಸಿಕೊಂಡಾಗ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ. ಹರಿದು ಹಂಚಿ ಹೋಗಿದ್ದ ಕರುನಾಡನ್ನು ಒಟ್ಟುಗೂಡಿಸುವುದಕ್ಕಾಗಿ ಅನೇಕ ಹಿರಿಯರು ಶ್ರಮಿಸಿದ್ದರಿಂದ 67 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆಂದರು.
ಹೆಚ್.ವಿ.ಕೃಷ್ಣಪ್ಪ, ಎ.ವಿ.ಮಹೇಶ್, ರಮೇಶ್, ಪಶುವೈದ್ಯ ಹರೀಶ್, ಕೃಷ್ಣಮೂರ್ತಿ, ಉಮೇಶ್, ಹರ್ಷ, ಮನು ಸೇರಿದಂತೆ ಜೆ.ಸಿ.ಆರ್.ಸಾಂಸ್ಕøತಿಕ ಯುವಕ ಸಂಘದ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ
ಎಲ್ಲರಿಗೂ ಸಿಹಿ ವಿತರಿಸಲಾಯಿತು.