ಚಿತ್ರದುರ್ಗ, (ನವೆಂಬರ್.28) : ನಗರದ ಬಿ.ಡಿ.ರಸ್ತೆಯ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯ ಸರ್ಕಾರದ ವಾಹನ ಚಾಲಕರ ಸಂಘ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರಿ ಅಧಿಕಾರಿಗಳನ್ನು ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಗಳಿಗೆ, ಚುನಾವಣಾ ಕರ್ತವ್ಯಕ್ಕೆ, ಜನಪ್ರತಿನಿಧಿಗಳ ಸಭೆಗೆ ಹಾಗೂ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಗಲಿರುಳು ದುಡಿದ ಸರ್ಕಾರದ ವಾಹನ ಚಾಲಕರಿಗೆ ಸನ್ಮಾನ ಹಾಗೂ ನಿವೃತ್ತಿ ಹೊಂದಿದ ಮತ್ತು ವೃಂದ ಬದಲಾವಣೆ ಹೊಂದಿದ ಚಾಲಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರದ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಮೋಸಿನ್ ಭಾಷಾ, ಖಜಾಂಚಿ ರಾಘವೇಂದ್ರ, ಸರ್ಕಾರದ ವಾಹನ ಚಾಲಕರ ಸಂಘದ ರವಿ, ವೆಂಕಟೇಶ್, ಟಿ.ತಿಮ್ಮಪ್ಪ, ಕೆ.ಟಿ.ಶ್ರೀನಿವಾಸ ಮೂರ್ತಿ, ಆರ್.ರಮೇಶ್, ಮನ್ಸೂರ್, ಎಸ್.ಚಂದ್ರಶೇಖರ್ ಇದ್ದರು.