ಮೈಸೂರು: ಎಂಇಎಸ್ ಸಂಘಟನೆಯನ್ನ ಬ್ಯಾನ್ ಮಾಡುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಇಂದು ಬಂದ್ ಗೆ ಕರೆ ನೀಡಿದ್ದವು. ಆದ್ರೆ ಸಾಕಷ್ಟು ವಿರೋಧದ ನಡುವೆ ಇಂದು ನಡೆಯಬೇಕಿದ್ದ ಬಂದ್ ಮುಂದೂಡಲಾಗಿದೆ. ಆದ್ರೆ ಬಂದ ಇಲ್ಲದೆ ಇದ್ದರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಲ್ಲಿ ಇಂದು ಕನ್ನಡಪರ ಸಂಘಟನೆಗಳು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ವಾಟಾಳ್ ನಾಗರಾಜ್ ಮಾತಿನ ಮೇರೆಗೆ ಈ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಫೋಟೋಗೆ ಚಪ್ಪಲಿ ಹಾರ ಹಾಕಿ ಧಿಕ್ಕಾರ ಕೂಗಿದ್ದಾರೆ. ಪದೇ ಪದೇ ಕನ್ನಡಿಗರ ಮನಸ್ಸಿಗೆ ಘಾಸಿ ಮಾಡುತ್ತಿರುವ ಮಹಾರಾಷ್ಟ್ರ ಸಿಎಂಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.