ಕನ್ನಡ ಭಾಷೆ ನಮ್ಮ ಅನ್ನದ ಭಾಷೆಯಗಬೇಕು : ಶಿಕ್ಷಕಿ ಕೆ. ಲತಾ

1 Min Read

 

ಚಿತ್ರದುರ್ಗ, (ನ.01) : ಬಾಲ್ಯದಿಂದ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ಕೆಲಸವಾಗಬೇಕು. ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ ಭಾಷೆಗೆ ಮಹತ್ವ ನೀಡುವ ಬದಲು ವರ್ಷ ಪೂರ್ತಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡದ ಘನತೆಯನ್ನು ಹೆಚ್ಚಿಸಬೇಕಾಗಿದೆ ಎಂದು ಹಾಯ್ಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ. ಲತಾ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಹಾಯ್ಕಲ್ ಗ್ರಾಮದಲ್ಲಿ ಮಂಗಳವಾರ ಬಾದರದಿನ್ನಿ ಆಟ್ರ್ಸ ಅಕಾಡೆಮಿ ಹಾಗೂ ಗ್ರಾಮದ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆ ಆಯೋಜಿಸಿದ್ದ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆ ನಮ್ಮ ಅನ್ನದ ಭಾಷೆಯಗಬೇಕು. ಕನ್ನಡ ಭಾಷೆಯಲ್ಲಿ ಇಂದು ಐಎಎಸ್ ಪರೀಕ್ಷೆ ಬರಿಯುವ ಅವಕಾಶವಿದೆ. ಪ್ರಪಂಚದ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಕೂಡ ಒಂದು ಅಂತಹ ಭಾಷೆಯನ್ನು ಬಳಸಲು ಇಂದಿನ ಯುವ ಜನಾಂಗ ಹಿಂಜರಿಯುತ್ತಿರುವುದು ವಿಷಾದದ ಸಂಗತಿ. ಕನ್ನಡಲ್ಲಿರುವ ಸಾಹಿತ್ಯ ತುಂಬ ಶ್ರೀಮಂತವಾಗಿದೆ.

ಕುವೆಂಪು, ಕಾರಂತರು, ಬೇಂದ್ರೆ ಅವರಂತಹ ಸಾಹಿತಗಳ ಸಾಹಿತ್ಯವನ್ನು ಮಕ್ಕಳು ಓದಬೇಕು. ಇಂದಿನ ಆಧುನಿಕ ಯುಗದಲ್ಲಿ ಎಷ್ಟೇ ತಾಂತ್ರಿಕತೆ ಮುಂದುವರೆದರೂ ಕನ್ನಡ ಭಾಷೆ ತನ್ನ ಮಹತ್ವ ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಬಾದರದಿನ್ನಿ ಆಟ್ರ್ಸ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ ಮಾತನಾಡಿ, ರಂಗಭೂಮಿಯ ಬೆಳವಣೆಯಲ್ಲಿ ಕನ್ನಡ ಭಾಷೆಯ ಪಾತ್ರ ಮಹತ್ವಾದಾಗಿದೆ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಬಳಸಲಾಗುವ ಕನ್ನಡವನ್ನು ಮಕ್ಕಳು ಗಮನವಿಟು ಗ್ರಹಿಸಬೇಕು. ಇದರಿಂದ ಅವರಿಗೆ ಭಾಷೆಯ ಪರಿಚಯವಾಗುತ್ತದೆ ಶಬ್ಧಗಳ ಉಚ್ಚಾರಣೆಯ ಮಹತ್ವ ತಿಳಿಯುತ್ತದೆ. ನಾಟಕಗಳಿಂದ ಹಳೆಗನ್ನಡ ಹಾಗೂ ಹೊಸಗನ್ನಡ ವ್ಯತ್ಯಾಸ ತಿಳಿದುಕೊಳ್ಳಬಹುದು. ಮಕ್ಕಳಲ್ಲಿ ಅಂತಹ ಆಸಕ್ತಿ ಬೆಳಸುವ ಜವಾಬ್ದಾರಿ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಇದೆ. ಕರ್ನಾಟದಲ್ಲಿ ಪ್ರತಿ 20 ಕಿ.ಮಿ.ಗೆ ಕನ್ನಡ ಭಾಷೆಯ ಸೊಗಡು ಬದಲಾಗುತ್ತದೆ ಅಂದರೆ ಕನ್ನಡ ಭಾಷೆ ಶಕ್ತಿ ತಿಳಿಯಬಹುದು ಎಂದರು.

ಇದೇ ಸಂದರ್ಭದಲ್ಲ ಬಾದರದಿನ್ನಿ ಆಟ್ರ್ಸ ಅಕಾಡೆಮಿಯ ಪ್ರಕಾಶ್ ಬಾದರದಿನ್ನಿ ಹಾಗೂ ಕಲಾವಿದ ಗುರುಕಿರಣ ಅವರಿಂದ ಶಾಲೆಯ ವಿದ್ಯಾಥಿಗಳಿಗೆ ರಂಗತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ್, ಶ್ರೀನಿವಾಸ, ಸುನಂದಮ್ಮ, ಆಶಾಲತಾ, ಸವಿತಾ, ಮೂಬಿನಾ ಹಾಗೂ ಕಲಾವಿದ ಗುರುಕಿರಣ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *