ಸುದ್ದಿಒನ್, ಚಿತ್ರದುರ್ಗ, (ನ.15) : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿಂದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಹಾಗೂ ಕ್ನನಡ ವಿಷಯದಲ್ಲಿ 125/125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲೆಯ ಹೆಸರಾಂತ ಸಾಹಿತಿ ಇತಿಹಾಸ ತಜ್ಞ ಖ್ಯಾತ ಸಂಶೋಧಕರು ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ನಿವೃತ್ತ ಪ್ರಾಚಾರ್ಯರಾದ ಡಾ|| ಬಿ.ರಾಜಶೇಖರಪ್ಪನವರು ಉದ್ಘಾಟಿಸಿ ಅನಂತರ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಳಸಬೇಕಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಭಾಷೆಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಇಂದಿನ ಕನ್ನಡ ಕುವರ/ಕುವರಿಯರಾದ ನೀವು ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು ಹಾಗಾದಾಗ ಮಾತ್ರ ಕನ್ನಡ ತನ್ನ ಆಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ನಂತರ 2019-20 ಮತ್ತು 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125/125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಡಾ|| ಬಿ.ರಾಜಶೇಖರಪ್ಪನವರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್ ಕುಮಾರ್ ರವರು ಸನ್ಮಾನ ಮಾಡಿ ಗೌರವಿಸಿದರು.
ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್, ಕ್ಯಾಂಪಸ್ ಇಂಚಾರ್ಜ್ ಪೃಥ್ವಿಶ್ ಎಸ್. ಎಮ್, ಮುಖ್ಯೋಪಾದ್ಯಾಯರಾದ ಸಂಪತ್ ಕುಮಾರ್ ಸಿ ಡಿ. ಹೆಡ್ ಕೋಆರ್ಡಿನೇಟರ್ ಬಸವರಾಜಯ್ಯ ಪಿ ಹಾಗೂ ಬೋಧಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಾತಲಿಂಗಪ್ಪ ಕೆ.ಎಸ್ ಅವರು ನಿರೂಪಿಸಿದರು. ಬಸವರಾಜ್ ಹೆಚ್ ಸ್ವಾಗತಿಸಿದರು. ಸುಚಿತ ಅವರು ವಂದಿಸಿದರು.