ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ
ವೇದಮೂರ್ತಿ, ಭೀಮಸಮುದ್ರ
ಮೊ : 80880 76203
ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ತಾಲ್ಲೂಕಿನ
ಭೀಮಸಮುದ್ರ ಗ್ರಾಮದ ತರಳುಬಾಳು ಕಲ್ಯಾಣ ಮಂಟಪದಲ್ಲಿ ಶ್ರೀ ಭೀಮೇಶ್ವರ ಬಾಲ ವಿಕಾಸ ಹಿರಿಯ ಪ್ರಾಥಮಿಕ ಶಾಲೆ 40 ವರ್ಷಗಳು ತುಂಬಿದ ಪ್ರಯುಕ್ತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ವರ್ಷ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮ ಮತ್ತು 250 ಮಕ್ಕಳಿಗೆ ವಾಶ್ರೂಟ್ ವಿತರಣೆ ಕಾರ್ಯಕ್ರಮ ನಡೆಯಿತು.
1985 – 1986 ಸಾಲಿನಲ್ಲಿ ಈ ವಿದ್ಯಾ ಸಂಸ್ಥೆಯನ್ನು ಗ್ರಾಮದ ಹಲವು ಮುಖಂಡರುಗಳು ಪ್ರಾರಂಭ ಮಾಡಿದರು ಸುತ್ತಮುತ್ತಲಿನ ಅದೆಷ್ಟೋ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಅತ್ಯುತ್ತಮಠದಲ್ಲಿದ್ದಾರೆ ವಿದ್ಯಾ ಸಂಸ್ಥೆ ಉದ್ದೇಶ ಗ್ರಾಮಾಂತರ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಸಿಗಬೇಕೆಂದು ಸಂಸ್ಥೆಯನ್ನು ಪ್ರಾರಂಭ ಮಾಡಿದರು.

ಕರ್ನಾಟಕ ಅರೆಕಾ ಜೇಮ್ ಬರ್ಸ್ ಆಫ್ ಕಾಮರ್ಸ್ ಅಧ್ಯಕ್ಷರಾದ ಜಿಎಂ ಪ್ರಸನ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿದೆ ಅದರಲ್ಲೂ ಮೊಬೈಲ್ ಇಂಟರ್ನೆಟ್ ಯುಗಾ ಎಂದು ಕರೆಯುತ್ತಿದ್ದೇವೆ ಆದರೆ ಕನ್ನಡ ಭಾಷೆಯಲ್ಲಿ ಓದಿ ಇತರ ಭಾಷೆಯನ್ನು ಕಲಿಯುವುದು ಬಹಳ ಸುಲಭ ಮಕ್ಕಳಿಗೆ ಮೊಬೈಲ್ ಹಾಗೂ ಟಿವಿ ಇಂಟರ್ನೆಟ್ ಉಪಯೋಗಿಸುವುದನ್ನು ಕಡಿಮೆ ಮಾಡಬೇಕು ಪುಸ್ತಕವನ್ನು ಹೆಚ್ಚಾಗಿ ಅಭ್ಯಾಸ ಮಾಡಿಸಿ ಮಕ್ಕಳು ಚೆನ್ನಾಗಿ ಓದಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಒಳ್ಳೆ ಹೆಸರನ್ನು ತರಲಿ ಹಳೆ ವಿದ್ಯಾರ್ಥಿಗಳನ್ನು ಕರಿಸಿ ಸನ್ಮಾನ ಮಾಡಿದ ಶಾಲೆಯ ಕಮಿಟಿಯವರಿಗೆ ಹಾಗೂ ಶಿಕ್ಷಕರೊಂದಕ್ಕೆ ಧನ್ಯವಾದಗಳು
ಚಿತ್ರದುರ್ಗ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಜಿ ಎಸ್ ಮಂಜುನಾಥ್ ಮಾತನಾಡಿ 1985 – 86 ಬಾಲ ವಿಕಾಸ ವಿದ್ಯಾ ಸಂಸ್ಥೆಯನ್ನು ಗ್ರಾಮದ ಎಲ್ಲಾ ಹಿರಿಯರು ಸ್ಥಾಪನೆ ಮಾಡಿದರು ಸ್ಥಾಪನೆ ಮಾಡಿ 40 ವರ್ಷಗಳ ಕಳೆದು ಹೋಗಿದೆ ವಿದ್ಯಾ ಸಂಸ್ಥೆ ಇಷ್ಟು ಮಟ್ಟಿಗೆ ಬೆಳೆದಿರುವುದು ಬಹಳ ಖುಷಿಯಾದ ಸಂಗತಿ ಈ ಶಾಲೆಯಲ್ಲಿ ಓದಿದ ಮಕ್ಕಳು ಇಂಜಿನಿಯರ್ ಪೊಲೀಸ್ ಲಾಯರ್ ಗಳಾಗಿದ್ದಾರೆ ಈಗ ಓದುತ್ತಿರುವ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ತಿಳಿಸಿದರು.
ಯುವ ಮುಖಂಡ ಜಿ ಎಸ್ ಅನಿತ್ ಕುಮಾರ್ ಮಾತನಾಡಿ ಗ್ರಾಮಾಂತರ ಮಟ್ಟದಲ್ಲಿ ಇಂಥ ಶಾಲೆ ಬೆಳೆಯುತ್ತಿರುವುದು ಬಹಳ ಸಂತೋಷಕರ ವಿಚಾರ 40ವರ್ಷ ಪೂರ್ಣಗೊಂಡಿರುವುದು ಅದರಲ್ಲೂ ಸಮಸ್ತ ಆಡಳಿತ ಮಂಡಳಿ ಬಹಳ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಅವರಿಗೆ ಅಭಿನಂದನೆಗಳು ಶಿಕ್ಷಕರು ಬಹಳ ಶ್ರದ್ಧೆಯಿಂದ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ ಓದುತ್ತಿರುವ ಮಕ್ಕಳು ಕೂಡ ಒಳ್ಳೆ ವಿದ್ಯಾಭ್ಯಾಸದ ಬಳಸಿಕೊಂಡು ಚೆನ್ನಾಗಿ ಓದಬೇಕು ಎಂದು ತಿಳಿಸಿದರು.
ಬಾಲ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಎ ಎಮ್ ಧನ್ಯ ಕುಮಾರ್ ಮಾತನಾಡಿ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಅವರಿಗೆ ಅಭಿನಂದನೆಗಳು ಹಾಗೂ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಸಂಪರ್ಕದಲ್ಲಿರಿ ಎಂದು ಹೇಳಿದರು.
250 ಮಕ್ಕಳಿಗೆ ವಾಸ್ಕೋಟ್ ವಿತರಣೆ ಮಾಡಲಾಯಿತು ಮಕ್ಕಳಿಗೆ ಜಿ ಎಮ್ ಕುಟುಂಬದಿಂದ ಓದುತ್ತಿರುವ ಮಕ್ಕಳಿಗೆ ಉಚಿತವಾಗಿ ಜಿ ಎಂ ಪ್ರಸನ್ ಕುಮಾರ್ ವಿತರಣೆ ಮಾಡಿದರು
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎ ಎಂ ಧನ್ಯ ಕುಮಾರ್ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಸಮಸ್ತೆಯ ಸದಸ್ಯರುಗಳಾದ ಬಿಟಿ ಪುಟ್ಟಪ್ಪ ಟಿ ಎಸ್ ಪ್ರಭುದೇವ್ ತಿಪ್ಪೇಸ್ವಾಮಿ ಸೇಷ್ಟಿ ಮಂಜುನಾಥ್ ಟಿ ಎಸ್ ರಾಜಶೇಖರಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್ ಪಟೇಲ್ ಸುಮಾ ಎಲ್ ಕೆ ಶೈಲೆಂದರ್ ಪಟೇಲ್ ಲೋಕೇಶ್ ಅಂಜಿನಪ್ಪ ಶಿವಕುಮಾರ್ ಮಂಜುನಾಥ್ ಹಾಗೂ ಶಾಲೆಯ ಶಿಕ್ಷಕ ವೃಂದ ಮಕ್ಕಳು ಪೋಷಕರು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್