ಮಾರ್ಚ್ 10 ರಂದು ಕರುನಾಡ ವಿಜಯಸೇನೆಯಿಂದ ಕನ್ನಡ ಹಬ್ಬ | ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

1 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07 : ಪ್ರತಿ ವರ್ಷದಂತೆ ಈ ಬಾರಿಯು ಕರುನಾಡ ವಿಜಯಸೇನೆಯಿಂದ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ. 10 ರಂದು ಸಂಜೆ 5-40 ಕ್ಕೆ ಕನ್ನಡ ಹಬ್ಬ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖ್ಯಾತ ಜನಪದ ಗಾಯಕ ಡಾ.ಮಹದೇವಸ್ವಾಮಿ ಮಳವಳ್ಳಿ ಇವರಿಗೆ ರಾಜಾವೀರ ಮದಕರಿನಾಯಕ ಪ್ರಶಸ್ತಿ, ಲೇಖಕಿ ಬಾ.ಹ. ರಮಾಕುಮಾರಿ ಇವರಿಗೆ ಒನಕೆ ಓಬವ್ವ ಪ್ರಶಸ್ತಿ ಹಾಗೂ ಇಪ್ಪತ್ತು ಸಾವಿರ ರೂ.ಗಳ ನಗದು ನೀಡಿ ಗೌರವಿಸಲಾಗುವುದು. ಸರಿಗಮಪ ಖ್ಯಾತಿಯ ಗಾಯಕರು ಹಾಗೂ ಗಿಚ್ಚಿಗಿಲಿಗಿಲಿ ತಂಡದಿಂದ ಮನೋರಂಜನಾ ಕಾರ್ಯಕ್ರಮವಿರುತ್ತದೆ.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಯವರಿಗೆ ಕೋಟೆ ನಾಡಿನ ರಾಜಕೀಯ ಭೀಷ್ಮ, ಡಿ.ಡಿ.ಪಿ.ಐ. ಕೆ.ರವಿಶಂಕರ್‍ರೆಡ್ಡಿಗೆ ಕೋಟೆನಾಡಿನ ಶಿಕ್ಷಣ ಕ್ರಾಂತಿಕಾರಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪನವರಿಗೆ ಕೋಟೆ ನಾಡಿನ ರಾಜಕೀಯ ಸುಪುತ್ರ ಬಿರುದು ನೀಡಿ ಸನ್ಮಾನಿಸಲಾಗುವುದು. ಇದಲ್ಲದೆ ಸಮಾಜದ ಕೊಳೆ ತೊಳೆಯುವವರು, ಪಾದರಕ್ಷೆ ಹೊಲಿಯುವವರು, ಕ್ಷೌರಿಕರು, ಅನಾಥ ಶವಗಳನ್ನು ಸಂಸ್ಕಾರ ಮಾಡುವವರು, ಬಟ್ಟೆ ಇಸ್ತ್ರಿ ಮಾಡುವವರು, ಪೌರ ಕಾರ್ಮಿಕರು, ಆಸ್ಪತ್ರೆಗಳಲ್ಲಿ ಶವ ಪೋಸ್ಟ್ ಮಾರ್ಟಂ ನಡೆಸುವವರನ್ನು ಗುರುತಿಸಿ ಗೌರವಿಸಲಾಗುವುದೆಂದು ಹೇಳಿದರು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡದ ಹಬ್ಬವನ್ನು ಸವಿಯುವಂತೆ ಕೆ.ಟಿ.ಶಿವಕುಮಾರ್ ವಿನಂತಿಸಿದರು.

ಕರುನಾಡ ವಿಜಯಸೇನೆ ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಯದರ್ಶಿ ಅಣ್ಣಪ್ಪ, ನಿಸಾರ್ ಅಹಮದ್, ಉಪಾಧ್ಯಕ್ಷೆ ರತ್ನಮ್ಮ, ಪ್ರದೀಪ್, ಜಗದೀಶ್ ಪಿ. ಸುರೇಶ್, ವಿದ್ಯಾರ್ಥಿ ಘಟಕದ ಅಖಿಲೇಶ್, ಮಣಿಕಂಠ, ಹರೀಶ್ ಕುಮಾರ್, ಸಂತೋಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *