Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಾದೇಶಿಕ ಭಾಷೆಯನ್ನು ಮಾತನಾಡಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯ : ಪ್ರಾಂಶುಪಾಲ ನಾಗರಾಜ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ನ.19): ನಾಡಿನ ಸಂಸ್ಕೃತಿ ದ್ಯೋತಕವಾಗಿ ಪ್ರಾದೇಶಿಕ ಭಾಷೆಯನ್ನು ಮಾತನಾಡಿದಾಗ ಮಾತ್ರ ಕನ್ನಡನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯ ಎಂದು ಸಿ.ಎನ್.ಸಿ.ಪಿ.ಯು.ಕಾಲೇಜು ಪ್ರಾಂಶುಪಾಲರಾದ ನಾಗರಾಜ್ ಎನ್.ತಿಳಿಸಿದರು.

ಕೆ.ಕೆ.ನ್ಯಾಷನಲ್ ಆಂಗ್ಲ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಲೇಖನಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭಾರತದ ದಕ್ಷಿಣ ಭಾಗದಲ್ಲಿ ಕನ್ನಡ ಮಾತನಾಡುವವರು ಇದ್ದಾರೆಂದು 1905 ರಲ್ಲಿಯೇ ಆಲೂರು ವೆಂಕಟರಾಯಪ್ಪನವರು ಕರ್ನಾಟಕವೆಂದು ನಾಮಕರಣ ಮಾಡುವಂತೆ ಹೇಳಿದ್ದರು. ಆದರೆ 1973 ನ.1 ರಂದು ಕರ್ನಾಟಕವೆಂದು ನಾಮಕರಣವಾಯಿತು. ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್ ಟಿ.ವಿ.ಯಿಂದ ದೂರಿವಿರಿಸಿ ಓದಿನ ಕಡೆ ಆಸಕ್ತಿ ವಹಿಸುವಂತೆ ಮಾಡುವ ಜವಾಬ್ದಾರಿ ಪೋಷಕರುಗಳ ಮೇಲಿದೆ. ಯಾಂತ್ರಿಕ ಜೀವನದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹಾಸ್ಟೆಲ್‍ಗಳಿಗೆ ಸೇರಿಸುವಂತಾಗಿದೆ. ಮಕ್ಕಳು ಯಾವಾಗಲೂ ತಂದೆ ತಾಯಿ ಆರೈಕೆಯಲ್ಲಿ ಬೆಳೆಯಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ ಮಕ್ಕಳು ಪಠ್ಯಗಳನ್ನು ಓದುವುದು ಕಡಿಮೆಯಾಗಿದೆ. ಆಕರ್ಷಣೆ, ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ಪೋಷಕರುಗಳ ಮೇಲಿದೆ. ನಿಸರ್ಗದ ಜೊತೆ ಮಕ್ಕಳು ಬೆಳೆದು ಕುಣಿದು ಕುಪ್ಪಳಿಸಬೇಕು. ಪುಸ್ತಕ ಎಂದರೆ ಜ್ಞಾನ ಭಂಡಾರವಿದ್ದಂತೆ. ಹಾಗಾಗಿ ಪಠ್ಯದ ಜೊತೆ ಬೇರೆ ಬೇರೆ ಪುಸ್ತಕಗಳನ್ನು ಓದುವ ಅಭಿರುಚಿ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದರು.

ಕೆ.ಕೆ.ಎಜುಕೇಷನ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ಮಾತನಾಡುತ್ತ ನಾಗಾಲೋಕಟದಲ್ಲಿ ಜಗತ್ತು ಓಡುತ್ತಿರುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತಿದೆ. ಮಕ್ಕಳು ಬರೆಯುವುದನ್ನು ರೂಢಿಸಿಕೊಳ್ಳಲಿ ಎನ್ನುವ ಉದ್ದೇಶಕ್ಕಾಗಿ ಲೇಖನಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 143 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೆ.ಕೆ.ಎಜುಕೇಷನ್ ಟ್ರಸ್ಟ್‍ನ ಉಪಾಧ್ಯಕ್ಷೆ ಶ್ರೀಮತಿ ದೇವಿಕಾ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿ ಶೇ.36 ರಷ್ಟು ಜನ ಕನ್ನಡ ಮಾತನಾಡುತ್ತಿದ್ದಾರೆ. ನಮ್ಮ ಧರ್ಮ ನಮ್ಮ ಭಾಷೆ ಎಲ್ಲಿಯೂ ಕಳೆದು ಹೋಗಬಾರದು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೋ ಬೇಡವೋ ಎನ್ನುವುದು ನಮ್ಮ ಕೈಯಲ್ಲಿದೆ.

ದೊಡ್ಡವರ ತಪ್ಪನ್ನು ಮಕ್ಕಳು ಅನುಸರಿಸುತ್ತಾರೆ. ಶಿಕ್ಷಣಕ್ಕಾಗಿಯಷ್ಟೆ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಕು. ಅದೇ ರೀತಿ ಟಿ.ವಿ.ಯಿಂದ ದೂರವಿರಬೇಕು. ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಓದುವ ಹವ್ಯಾಸ ಕಲಿಸಬೇಕು. ಪಠ್ಯಪುಸ್ತಕದ ಜೊತೆ ಬೇರೆ ಬೇರೆ ಪುಸ್ತಕಗಳನ್ನು ಓದಿದರೆ ಜ್ಞಾನ ವೃದ್ದಿಯಾಗುತ್ತದೆ ಎಂದು ತಿಳಿಸಿದರು.

ಲೇಖನಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ವಾಸವಿ ಪ್ರೌಢಶಾಲೆಯ ಎಂಟನೆ ತರಗತಿಯ ಐಶ್ವರ್ಯ, ದ್ವಿತೀಯ ಬಹುಮಾನ ಪಡೆದ ವಿದ್ಯಾವಿಕಾಸ ಶಾಲೆಯ ಹತ್ತನೆ ತರಗತಿಯ ಆಸ್ಮ, ತೃತೀಯ ಬಹುಮಾನ ಪಡೆದ ಕೆ.ಕೆ.ನ್ಯಾಷನಲ್ ಸ್ಕೂಲ್ ಹತ್ತನೆ ತರಗತಿಯ ಕನ್ನಿಕಾ ಇವರುಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!