Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜು.7 ರಂದು ಕನ್ನಡ ಭವನ ಸಮಿತಿ ಸಭೆ

Facebook
Twitter
Telegram
WhatsApp

 

ಚಿತ್ರದುರ್ಗ : ಜಿಲ್ಲಾ ಕನ್ನಡ ಭವನ ಸಮಿತಿ ಸಭೆಯನ್ನು ಜು.7 ರ ಗುರುವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ.

ಕರ್ನಾಟಕ ಸರಕಾರದಿಂದ ಬಿಡುಗಡೆಯಾದ ಅನುದಾನ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ನೀಡಿದ ಹಣದಲ್ಲಿ 75 ನೇ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. 2009 ಫೆ.4 ರಿಂದ 7 ರವರೆಗೆ ಜರುಗಿದ ಈ ಸಮ್ಮೇಳನದಲ್ಲಿ ಹಣ ಉಳಿತಾಯವಾಗಿತ್ತು. ಇದರಲ್ಲಿ ಉಳಿದ ಹಣದಿಂದ ಕನ್ನಡ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಸಭೆ ಕರೆಯಲಾಗಿದೆ.

ಅಂದು ಮಧ್ಹಾಹ್ನ 1 ಗಂಟೆಗೆ ಜರುಗುವ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಧನಂಜಯ, ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಿವೃತ್ತ ಸಹಾಯಕ ನಿರ್ದೇಶಕ ಕೆ.ವೆಂಕಣ್ಣಾಚಾರ್, ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್,ಎಲ್.ರಮೇಶ್ ರಾವ್, ಕಸಾಪ ಮಾಜಿ ಅಧ್ಯಕ್ಷರುಗಳಾದ ಕೆ.ಎಂ.ವೀರೇಶ್, ಆರ್.ಮಲ್ಲಿಕಾರ್ಜುಜನಯ್ಯ, ದೊಡ್ಡಮಲ್ಲಯ್ಯ, ಎಸ್‍ಬಿಐ ವ್ಯವಸ್ಥಾಪಕ ಸಭೆಯಲ್ಲಿ ಭಾಗವಹಿಸಲಿದ್ದಾರೆ‌ ಎಂದು ಕಸಾಪ ಜಿಲ್ಲಾಧ್ಯಕ್ಷ
ಕೆ.ಎಂ.ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಎಂ.ಶಿವಸ್ವಾಮಿ
ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು, ಚಿತ್ರದುರ್ಗ ಜಿಲ್ಲೆ. 9449510078

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದೇ ಸಮನೆ ಸುರಿಯುತ್ತಿರುವ ಮಳೆ : ಬೆಂಗಳೂರಿನಲ್ಲಿ ಏರಿಕೆಯಾಯ್ತು ಟೊಮೆಟೊ ಬೆಲೆ..!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮಳೆರಾಯ ಪುರುಸೊತ್ತನ್ನು ಕೊಡದಂತೆ ಸುರಿಯುತ್ತಿದ್ದಾನೆ.‌ ಇದರಿಂದ ಹಲವು ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಬೆಳೆ ನಷ್ಟದಿಂದಾಗಿ ಬೆಲೆ ಏರಿಕೆಯ ಬಿಸಿಯೂ ಗ್ರಾಹಕರನ್ನು ಬಾಧಿಸುತ್ತಿದೆ. ಈಗಾಗಲೇ ಈರುಳ್ಳಿ ಬೆಲೆ ಏರಿಕೆಯಿಂದಾನೇ

ಜಾತಿಗಣತಿ ಜಾರಿಯಿಂದ ಸರ್ಕಾರ ಉರುಳುತ್ತದೆ ಎಂದಾದರೇ ಹಾಗೆಯೇ ಆಗಲಿ : ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ

ಬೆಂಗಳೂರು: ಜಾತಿಗಣತಿ ಜಾರಿಯಾಗಲಿದೆ ಎಂದು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಾಗಿನಿಂದ ಪರ-ವಿರೋಧ ಚರ್ಚೆಗಳು ಕೇಳಿ ಬರುತ್ತಲೇ ಇದಾವೆ. ಆದರೆ ಸರ್ಕಾರದಿಂದ ಮಾತ್ರ ಇನ್ನು ಜಾರಿಯಾಗಿಲ್ಲ. ಈ ಬಗ್ಗೆ ಇದೀಗ ಕಾಂಗ್ರೆಸ್ ಎಂಎಲ್ಸಿಯಾಗಿರುವ ಬಿ.ಕೆ.ಹರಿಪ್ರಸಾದ್ ವಿಚಾರ

ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ : ಮೊದಲ ಬಾರಿಗೆ ಅಣ್ಣನ ಬಗ್ಗೆ ಮಾತಾಡಿದ ದಿನಕರ್ ತೂಗುದೀಪ..!

ತುಮಕೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್, ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ಕೂಡ ಅರ್ಜಿಯ ವಿಚಾರಣೆ ನಡೆದಿದ್ದು, ಜಾಮೀನು ಸಿಗುವ ಭರವಸೆಯನ್ನು ಅಭಿಮಾನಿಗಳು ಇಟ್ಟುಕೊಂಡಿದ್ದರು. ಆದರೆ

error: Content is protected !!