ಚಿತ್ರದುರ್ಗ: ಕಣಿವೆಮಾರಮ್ಮ ಜಾತ್ರೆ ಅಂಗವಾಗಿ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನನ್ನು ಶುಕ್ರವಾರ ಅದ್ದೂರಿಯಾಗಿ ಅಲಂಕರಿಸಲಾಗಿತ್ತು.
ಬಗೆ ಬಗೆಯ ಹೂವು ಹಾರ ಚಿನ್ನ ಬೆಳ್ಳಿ ಆಭರಣಗಳಿಂದ ಕಣಿವೆಮಾರಮ್ಮನನ್ನು ಝಗಮಗಿಸುವಂತೆ ಸಿಂಗರಿಸಲಾಗಿತ್ತು. ಅಂಬೇಡ್ಕರ್ ಪ್ರತಿಮೆಯಿಂದ ಹಿಡಿದು ದೇವಸ್ಥಾನದವರೆಗೂ ಭಕ್ತರು ಸರದಿಯ ಸಾಲಿನಲ್ಲಿ ನಿಂತು ಕಣಿವೆಮಾರಮ್ಮನ ದರ್ಶನ ಪಡೆದರು.
ಬೆಳಗಿನಿಂದ ರಾತ್ರಿಯವರೆಗೂ ಸಹಸ್ರಾರು ಭಕ್ತರು ಕಣಿವೆಮಾರಮ್ಮನಿಗೆ ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಮುಂಭಾಗ ಚಪ್ಪರ ಹಾಕಿ. ನಾನಾ ಬಗೆಯ ಹೂವು ಹಾಗೂ ಬಾಳೆದಿಂಡು, ಸೀರಿಯಲ್ ಲೈಟ್‌ಗಳಿಂದ ಅಲಂಕರಿಸಲಾಗಿತ್ತು.
ಅನ್ನಸಂತರ್ಪಣೆ: ಪ್ರವಾಸಿ ಮುಂದಿರದ ಮುಂಭಾಗದ ರಸ್ತೆಯಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭಗೊಂಡ ಅನ್ನಸಂತರ್ಪಣೆ ಸಂಜೆಯವರೆಗೂ ನಿರಂತರವಾಗಿ ಸಾಗಿತ್ತು. ಕಣಿವೆಮಾರಮ್ಮ ದೇವಸ್ಥಾನ ಸಮಿತಿಯವರು ಅನ್ನಸಂತರ್ಪಣೆಯ ಉಸ್ತುವಾರಿಯವನ್ನು ವಹಿಸಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡರು.