Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೋಟರಿಕ್ಲಬ್ ನ ನೂತನ ಅಧ್ಯಕ್ಷರಾಗಿ ಕನಕರಾಜು, ಕಾರ್ಯದರ್ಶಿಯಾಗಿ ವಿಕ್ರಾಂತ್ ಜೈನ್ ಪದಗ್ರಹಣ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.02) : ರೋಟರಿ ಕ್ಲಬ್ ಸೇವಾ ಸಂಸ್ಥೆಯಾಗಿದ್ದು ಬಡವರ ಸಮಸ್ಯೆಯನ್ನು ಅರಿತು ಅದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಮುಂದಾಗುವಂತೆ ನೂತನ ಕ್ಲಬ್‌ನ ಪದಾಧಿಕಾರಿಗಳಿಗೆ 3170 ಜಿಲ್ಲೆಯ ರೋ.ಪಿಡಿಜಿ ಅವಿನಾಶ್ ಪೂದ್ದಾರ್ ಕರೆ ನೀಡಿದರು.

ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಟರಿಕ್ಲಬ್ ಚಿತ್ರದುರ್ಗ 3160ರ 2023-24ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಗೌಪ್ಯತೆಯ ಪ್ರಮಾಣವನ್ನು ಭೋಧಿಸಿ ಮಾತನಾಡಿದರು.

ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಇದ್ಧಾಗ ಮಾತ್ರ ಬಡವರ ಸೇವೆಯನ್ನು ಮಾಡುವುದರ ಮೂಲಕ ಅವರ ಸೇವೆಗೆ ಪಾತ್ರರಾಗಬೇಕಿದೆ. ಅವರಿಗೆ ನೀವು ಮಾಡಿದ ಸೇವೆ ಶಾಶ್ವತವಾಗಿರಬೇಕಿದೆ ಆಗ ಮಾತ್ರ ನಿಮ್ಮ ನೆನಪು ಇರಲು ಸಾಧ್ಯವಿದೆ ಎಂದರು.

ರೋಟರಿ ಕ್ಲಬ್‌ನ ಸದಸ್ಯರು ನೀಡಿದ ಸಲಹೆ, ಸೂಚನೆಯನ್ನು ಸ್ವೀಕಾರ ಮಾಡಿ ಅದನ್ನು ಸಾಧ್ಯವಾದಷ್ಟು ಬಳಕೆ ಮಾಡಿಕೊಳ್ಳಿ, ಎಲ್ಲರನ್ನು ಸಮಾನವಾಗಿ ನೋಡಿ ಯಾರನ್ನು ಸಹಾ ಕೀಳಾಗಿ ಕಾಣಬೇಡಿ, ಬಡವರ ಸೇವೆಯನ್ನು ಮಾಡುವುದರ ಮೂಲಕ ಸಂತೋಷವನ್ನು ಕಂಡುಕೊಳ್ಳಿ, ರೋಟರಿ ಕ್ಲಬ್ ಸೇವಾ ಕೇಂದ್ರವಾಗಿದೆ ಇಲ್ಲಿ ಬರುವ ಬಡವರಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ ಇದರಿಂದ ನಿಮ್ಮಗೆ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವಿದೆ.ಈ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಉತ್ತಮವಾದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳು ಸಾಧ್ಯವಿದೆ ಎಂದು ರೋ.ಪಿಡಿಜಿ ಅವಿನಾಶ್ ಪೂದ್ದಾರ್ ತಿಳಿಸಿದರು.

ಪಿಎಚ್.ಎಫ್.ಮಹಾನಂದಿ ಸುರೇಶ್ ಮಾತನಾಡಿ, ರೋಟರಿ ಕ್ಲಬ್‌ನ ಹಿಂದಿನ ಅಧ್ಯಕ್ಷರು ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇದನ್ನು ಈಗಿನ ಪದಾಧಿಕಾರಿಗಳು ಮುಂದುವರೆಸಿ ಕೊಂಡು ಹೋಗಬೇಕಿದೆ. ಅದ್ಯಕ್ಷರಾದವರು ಎಲ್ಲರನ್ನು ಸಹಾ ಸಮಾಲಿಸಿಕೊಂಡು ಹೋಗಬೇಕಿದೆ. ಮುಂದಿನ ದಿನದಲ್ಲಿ ಉತ್ತಮವಾದ ತಂಡವಾಗಿ ಹೂರಹೊಮ್ಮಬೇಕಿದೆ. ಮುಂದಿನ ದಿನದಲ್ಲಿ ನಿರ್ಮಾಣವಾಗಲಿರುವ ಡಯಾಲಿಸಿಸಿ, ಫಿಯೋಜೋಥರಪಿ ಕೇಂದ್ರಗಳು ಬಡ ಜನರಿಗೆ ಉಪಯೋಗವಾಗುವ ಕೇಂದ್ರವಾಗಲಿ, ಶೀಘ್ರದಲ್ಲಿಯೇ ಅದನ್ನು ಪ್ರಾರಂಭ ಮಾಡಿ ಎಂದ ಅವರು, ನಿಮ್ಮ ಸದಸ್ಯರು ಮತ್ತು ಜನತೆಯಲ್ಲಿ ಭರವಸೆಯನ್ನು ಮೂಡಿಸುವ ಕಾರ್ಯವನ್ನು ಮಾಡುವಲ್ಲಿ ಮುಂದಾಗಲಿ, ಜನತೆಯ ಭರವಸೆಯನ್ನು ಈಡೇರಿಸುವಲ್ಲಿ ರೋಟರಿ ಕ್ಲಬ್ ತಂಡ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ರೋಟರಿಕ್ಲಬ್ ಚಿತ್ರದುರ್ಗ 3160ರ 2023-24ನೇ ಸಾಲಿಗೆ ಅಧ್ಯಕ್ಷರಾದ ಬಿ.ಎಸ್.ಕನಕರಾಜು ಮಾತನಾಡಿ, ನಮ್ಮ ಅವಧಿಯಲ್ಲಿ ಆರೋಗ್ಯ ಶಿಬಿರ, ಮಕ್ಕಳಿಗೆ ಆರೋಗ್ಯದ ಬಗ್ಗೆ ಅರಿವು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ, ಪರಿಸರದ ಬಗ್ಗೆ ಜಾಗೃತಿ, ಪ್ರಾಣಿ, ಪಕ್ಷಿಗಳ ಬಗ್ಗೆ ಅರಿವು, ಸಂಚಾರಿ ನಿಯಮಗಳ ಪಾಲನೆ ಬಗ್ಗೆ ತಿಳಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಅವರು, ನಗರದ ಚಳ್ಳಕೆರೆ ರಸ್ತೆಯಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಯಾಲಿಸಿಸ್‌ ಕೇಂದ್ರ ಅತಿ ಶೀಘ್ರವಾಗಿ ಪ್ರಾರಂಭವಾಗಲಿದೆ.

ಇದರಿಂದ ಹಲವಾರು ಜನರಿಗೆ ಸಹಾಯವಾಗಲಿದೆ. ಇದನ್ನು ವಿವಿಧ ದಾನಿಗಳಿಂದ ಹಣವನ್ನು ಸಂಗ್ರಹ ಮಾಡುವುದರ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಈ ಕೇಂದ್ರದ ಸುತ್ತಾ ಸುಮಾರು ವಿವಿಧ ರೀತಿಯ 150 ಸಸಿಗಳನ್ನು ನೆಡಲು ಉದ್ದೇಶಿಸಲಾಗಿದ್ದೂ ಈಗಾಗಲೇ 50 ಸಸಿಗಳನ್ನು ನಡೆಲಾಗಿದೆ ಉಳಿದವನ್ನು ಮುಂದಿನ ದಿನದಲ್ಲಿ ನಡೆಲಾಗುವುದು ಎಂದರು.

ರೋಟರಿಕ್ಲಬ್ ಚಿತ್ರದುರ್ಗ 3160ರ 2023-24ನೇ ಸಾಲಿನ ಕಾರ್ಯದರ್ಶಿ ವಿಕ್ರಾಂತ್ ಜೈನ್, ಹಿಂದಿನ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಮಧುಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಜಯಶ್ರೀ ಷಾ, ಚಿನ್ಮೂಲಾದ್ರಿ ಜೋನ್‌ನ ಅಸಿಸೆಂಟ್ ಗೌರ‍್ನರ್ ಉಮೇಶ್ ತೊಪ್ಪದ್, ಪಿಡಿಜಿ ಕೆ.ಮಧುಪ್ರಸಾದ್ ಹಾಗೂ ಪಿ.ಎಚ್.ಎಫ್. ಎಂ.ಕೆ.ರವೀಂದ್ರ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ ಕೇಸ್ ಸಿಐಡಿಗೆ ಒಪ್ಪಿಸಿದ ಸರ್ಕಾರ : ಬೇಸರ ಮಾಡಿಕೊಂಡ ರಂಭಾಪುರಿ ಶ್ರೀಗಳು

ಹುಬ್ಬಳ್ಳಿ: ನೇಹಾಳ ಕೊಲೆಯಾದ ಮೇಲೆ ನಿರಂಜನ ಹೀರೆಮಠ ಅವರಿಗೆ ಸಾಂತ್ವನ ಹೇಳಲು ಇಂದು ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದಾರೆ. ಮನೆಗೆ ಬಂದು ಧೈರ್ಯ ಹೇಳಿ, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಸನ್ನು

ಬೆಳಗಾವಿಯಲ್ಲಿ ಪ್ರಧಾನಿ ಮೋದಿ : ಸಿಎಂ ಸಿದ್ದರಾಮಯ್ಯ ವಿಮಾನಕ್ಕೆ ನಿರಾಕರಣೆ..!

ಬೆಳಗಾವಿ: ರಾಜ್ಯದ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿದ್ದು, ಬಳಿಕ ಅಲ್ಲಿಂದ ಶಿರಸಿಗೆ ತೆರಳಲಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಜನರನ್ನುದ್ದೇಶಿಸಿ

ದಾವಣಗೆರೆ, ಶಿರಸಿಯಲ್ಲಿ ಮೋದಿ ಮತಬೇಟೆ : ಬೆಳಗಾವಿಯಿಂದ ಆರಂಭ

ಬೆಳಗಾವಿ: ಈಗಾಗಲೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಜನತೆ ರೆಡಿಯಾಗಿದ್ದಾರೆ. ಈಗಾಗಲೇ ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ನಾಳೆಯೂ ರಾಜ್ಯ

error: Content is protected !!