ಕಮಲ್ ಹಾಸನ್ ಕನ್ನಡ ವಿವಾದ : ಥಗ್‍ಲೈಫ್ ಚಿತ್ರ ಪ್ರದರ್ಶನಕ್ಕೆ ಕರವೇ ವಿರೋಧ

1 Min Read

ವರದಿ ಮತ್ತು ಫೋಟೋ ಕೃಪೆ                    ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ತಮಿಳಿನಿಂದ ಕನ್ನಡ ಹುಟ್ಟಿದೆಯೆಂದು ವಿವಾದಾತ್ಮಕವಾಗಿ ಮಾತನಾಡಿರುವ ನಟ ಕಮಲಹಾಸನ್ ನಟಿಸಿರುವ ಥಗ್‍ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ ಎಂಬ ಸಾಮಾನ್ಯ ಜ್ಞಾನವಿಲ್ಲದ ನಟ ಕಮಲಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವುದು ಸರಿಯಲ್ಲ. ಕೂಡಲೆ ಕಮಲಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ತಿಂಗಳು ಐದನೆ ತಾರೀಖಿನಂದು ರಾಜ್ಯದಲ್ಲಿ ಬಿಡುಗಡೆಗೆ ಸಿದ್ದಗೊಂಡಿರುವ ಥಗ್‍ಲೈಫ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ತಾಲ್ಲೂಕು ಅಧ್ಯಕ್ಷ ರಾಜಪ್ಪ ಜಿ. ಪ್ರಧಾನ ಸಂಚಾಲಕ ಎಸ್.ಬಿ.ಗಣೇಶ್ ಉಪಾಧ್ಯಕ್ಷ ಆರ್.ಬಿ.ಲಕ್ಷ್ಮಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನೀಲಕಂಠ, ಘನಶ್ಯಾಮ್, ಪ್ರಸಾದ್‍ಮಲ್ಲ, ರಮೇಶ್, ರಾಮು, ಅನಿಲ್, ರಾಮಕೃಷ್ಣಪ್ಪ, ದಾದಾಪೀರ್, ಗೋ.ಬಸವರಾಜ್, ಜಾಫರ್, ಜಾಕೀರ್, ಚಂದ್ರಕಲಾ, ದ್ರಾಕ್ಷಾಯಿಣಿ, ಮಂಜುಳ, ಸುಮ, ಅಂಬಿಕ, ಮನು, ಮಹದೇವಯ್ಯ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks