ನವದೆಹಲಿ: ಮಹಾತ್ಮ ಗಾಂಧೀಜಿ ಬಗ್ಗೆ ಕಾಳಿಚರಣ ಮಹಾರಾಜ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆ ಮೇಲೆ ಇದೀಗ ಕಾಳಿಚರಣ ಸ್ವಾಮೀಜಿ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಇವತ್ತು ಕಾಳಿಚರಣ ಮಹಾರಾಜನನ್ನ ಖಜುರಾಹೋದಾ ವಾಘೇಶ್ವರ ಧಾಮದಲ್ಲಿ ಬಂಧನ ಮಾಡಲಾಗಿತ್ತು. ಛತ್ತೀಸ್ಗಢ ಪೊಲೀಸರು ಈತನನ್ನ ಬಂಧಿಸಿದ್ದರು. ಇದೀಗ ದೇಶದ್ರೋಹ ಪ್ರಕರಣ ಹಾಕಲಾಗಿದೆ. ಇಂದು ಸಂಜೆ ವೇಳೆಗೆ ಕಾಳಿಚರಣನನ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ ಎಂದು ರಾಯಪುರ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಕಾಳಿಚರಣ ಮಹಾರಾಜ ರಾಯಪುರದಲ್ಲಿ ನಡೆದ ಧರ್ಮ ಸನ್ನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಮಹಾತ್ಮ ಗಾಂಧೀಜಿ ಬಗ್ಗೆ ಹಾಗೂ ಅವರ ಹತ್ಯೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಎನ್ ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಜಿತೇಂದ್ರ ಅವದ್ ಅವರು ಕಾಳಿಚರಣ ವಿರುದ್ದ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಂಧಿಸಿ, ದೇಶದ್ರೋಹ ಪ್ರಕರಣ ಹಾಕಲಾಗಿದೆ.
ಈ ಸಂಬಂಧ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಕಾಳಿಚರಣರನ್ನ ಪೊಲೀಸರು ಕರೆದುಕೊಂಡು ಹೋಗುತ್ತಿರುವ ವಿಡಿಯೋ ಶೇರ್ ಮಾಡಿ, ಜೈ ಗಾಳಿ ಎಂದು ಬರೆದುಕೊಂಡಿದೆ.