ಕಲಿಯುಗದ ಅಂತ್ಯವಾಗಲಿದೆ.. ರಾಜಕೀಯದಲ್ಲಿ ದೊಡ್ಡ ಬದಲಾವಣೆ; ಕಾಲಜ್ಞಾನಿ ಮುತ್ತ್ಯ ಶಾಕಿಂಗ್ ಭವಿಷ್ಯ

suddionenews
1 Min Read

ಸದಾಶಿವ ಮುತ್ತ್ಯ ಭವಿಷ್ಯವಾಣಿ ಎಂದರೆ ಲಕ್ಷಾಂತರ ಜನರ ನಂಬಿಕೆಯಾಗಿದೆ.‌ ಇದೀಗ 2025ರ ಸ್ಪೋಟಕ ಭವಿಷ್ಯವನ್ನ ಇದಿಒಗ ಮುತ್ತ್ಯ ನುಡಿದಿದ್ದಾರೆ. ವಿಜಯಪುರದ ಬೆಂಕಿ ಬಬಲಾದಿ ಮಠದ ಸದಾಶಿವ ಮುತ್ತ್ಯಾನಮಠದ ಸದಾಶಿವ ಮುತ್ತ್ಯಾ ಭವಿಷ್ಯ ಕೇಳಿ ಭಕ್ತರು ದಿಗ್ಬ್ರಾಂತರಾಗಿದ್ದಾರೆ. ಕಲಿಯಿಗ ಕಾಲದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಣ್ಣ ಎಂದು ಹೇಳಲಾಗಿದೆ.

ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವುಗಳಾಗಲಿದ್ದು, ಹಣದ ಜೊತೆಗೆ ಜನರಿಗೆ ಬಂಧುತ್ವದ ಬಗ್ಗೆ ತಿಳಿಯುವ ಸಮಯ ಬಂದಿತು, ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆಯಾಗಬಹುದು ಎಂದು ಹೇಳಿರುವುದು ಜನರಿಗೆ ಆತಂಕ ತಂದೊಡ್ಡಿದೆ. ಕಾಡ್ಗಿಚ್ಚಿನ ಮುನ್ಸೂಚನೆಯನ್ನು ನೀಡಿದ್ದು, ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ನಿರೀಕ್ಷೆಗೂ ಮೀರಿದ ಕಾಯಿಲೆಗಳು ಬರಲಿವೆ ಎಂದಿದ್ದಾರೆ.

ಇನ್ನು ರಾಜಕೀಯದ ಬಗ್ಗೆಯೂ ಭವಿಷ್ಯದಲ್ಲಿ ತಿಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂಬ ಸೂಚನೆಯನ್ನು ನೀಡಿದೆ. ಇದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಆರ್ಥಿಕತೆಯಲ್ಲಿ ಸಮಸ್ಯೆಯನ್ನು ಎದುರಿಸಲಿದೆ ಎಂದು ಭವಿಷ್ಯದಲ್ಲಿ ನಮೂದಿಸಿದ್ದಾರೆ. ಈ ವರ್ಷ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಸೃಷ್ಟಿಯಾಗಲಿದೆ‌. ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತವೆ. ದೇಶದಲ್ಲಿ ಕಳ್ಳರ ಕಾಟ ಹೆಚ್ಚಾಗಲಿದೆ. ಮಳೆ ಬೆಳೆ ಕಡಿಮೆ ಇರಲಿದೆ. ರಾಷ್ಟ್ರದ ನಾಯಕರಿಗೆ ಅನಿಷ್ಠ ಕಾದಿದೆ. ಆಳುವ ಮಹಾ ನಾಯಕರಿಗೆ ಆಪತ್ತು ಕಾದಿದೆ ಎಂದು ಮುತ್ತ್ಯಾ ತಮ್ಮ ಭವಿಷ್ಯವನ್ನ ನುಡಿದಿದ್ದಾರೆ. ಇದು ಸಹಜವಾಗಿಯೇ ಸಾಮಾನ್ಯ ಮನುಷ್ಯರಿಗೆ ಆತಂಕವನ್ನು ಸೃಷ್ಟಿಸಿದೆ. ಮುತ್ತ್ಯಾ ಭವಿಷ್ಯವನ್ನು ನಂಬುವವರು ಹೆಚ್ಚಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *