ಬೆಂಗಳೂರು: ಯುಗಾದಿ ಹಬ್ಬ ಹತ್ತಿರ ಬರುತ್ತಿದೆ. ಹೊಸತಡುಕಿಗೆ ಎಲ್ಲರೂ ಮಾಂಸಾಹಾರವನ್ನ ಖರೀದಿ ಮಾಡುತ್ತಾರೆ. ಇದೇ ವಿಚಾರವಾಗಿ ಕಾಳಿ ಸ್ವಾಮಿ ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಲಾಲ್ ಇಲ್ಲದ್ದು ಹರಾಮ್ ಅಂತ ಅವರು ಹೇಳುತ್ತಾರೆ. ನಾವು ಹೇಳ್ತೀವಿ ಹಲಾಲ್ ಮಾಡಿದ್ದು ಹಿಂದೂಗಳಿಗೆ ಹರಾಮ್ ಅಂತ. ದಯವಿಟ್ಟು ಹಿಂದೂ ಧರ್ಮದ ಯತಿಗಳು, ಆದಿ ಚುಂಚನಗಿರಿ ಶ್ರೀಗಳಿಗೆ ಮನವಿ ಮಾಡುತ್ತೀನಿ. ಚುಂಚನಕಟ್ಟೆಯಲ್ಲಿ ಭಾನುವಾರ ಆದರೆ ಸಾಕು ಅದೆಷ್ಟು ಮರಿಗಳು ಬೀಳುತ್ತಾವೆ. ನಿಮ್ಮ ಭಕ್ತರಿಗೆ ತಾಕೀತು ಮಾಡಿ, ಮಹಮದೀಯರ ಅಂಗಡಿಗಳಲ್ಲಿ ಹಲಾಲ್ ಆಗಿರುವುದನ್ನ ತರಬೇಡಿ ಎಂದು.
ಸರ್ದಾರ್ ಸೇವಲಾಲ್ ಸ್ವಾಮೀಜಿಗಳೇ ನಿಮ್ಮ ತಾಂಡ್ಯಾದಲ್ಲಿ ವಿಜೃಂಭಣೆಯಿಂದ ಹಬ್ಬ ಆಗಿರುತ್ತೆ. ನೀವು ತಾಕೀತು ಮಾಡಿ ಗುರುಗಳೇ. ನಿಮ್ಮ ಭಕ್ತರ ಆಹಾರ ನಿಯಮ ಹೀಗೆ ಇರಬೇಕು ಅಂತ ನೀವೂ ಹೇಳಿ. ಒಬ್ಬ ಮುಲ್ಲ ಅವರ ಭಕ್ತರ ಆಹಾರ ನಿಯಮ ಹೀಗೆ ಒರಬೇಕು ಅಂತ ಅವನೇಳೋದಾದ್ರೆ, ನಾವೂ ನಮ್ಮ ಭಕ್ತರ ಆಹಾರ ಹೀಗೆ ಇರಬೇಕು ಅಂತ ಯಾಕೆ ಹೇಳಬಾರದು.
ನಮ್ಮಿಂದ ಆದಂಥ ಅಪಚಾರವೇನು. ನಾನು ಖಾವಿ ಆರಾಧಕ. ನಾವೇನು ಖದ್ದು ಮುಚ್ಚಿ ತಿನ್ನಬೇಕಾದ್ದಲ್ಲ. ಬಲಿಯಾದದ್ದನ್ನ ಮಠಕ್ಕೆ ತಂದು ಕೊಡ್ತಾರೆ. ಇದು ನಡೆದುಕೊಂಡು ಬಂದಿರೋದು. ಇದು ಇವತ್ತು ನಿನ್ನೆ ನಡೆದುಕೊಂಡು ಬಂದಿರೋದಲ್ಲ. ಕಾಲ ಕಾಲದಿಂದಲೂ ನಡೆದು ಬಂದಿದೆ. ನಮ್ಮ ಭಕ್ತರಿಗೆ ಹೇಳಿದ್ದೇವೆ, ಸಂದೇಶ ಕೊಟ್ಟಿದ್ದೇವೆ. ಖಂಡಿತವಾಗಲೂ ರಾಜ್ಯದ ತುಂಬ ಈ ಹಲಾಲ್ ಅನ್ನ ನಿಷೇಧ ಮಾಡಬೇಕು. ಹಲಾಲ್ ಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ.