ನವದೆಹಲಿ : ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಕಲಾವತಿಯ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ. ಕಲಾವತಿಗೆ ಸಹಾಯ ಮಾಡಿದ್ದು ನಮ್ಮ ಸರ್ಕಾರ. ನಿಮ್ಮ ರಾಹುಲ್ ಗಾಂಧಿ ಯಾವ ಸಹಾಯವನ್ನು ಮಾಡಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ.
ಬಿಜೆಪಿ ನಾಯಕ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ರಾಹುಲ್ ಗಾಂಧಿ ಪರ ನಿಂತಿರುವ ಕಾಂಗ್ರೆಸ್ ನಾಯಕರು ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಕಲಾವತಿ ಎಂಬ ಬಡ ಮಹಿಳೆಗೆ ರಾಹುಲ್ ಗಾಂಧಿಯವರು 30 ಲಕ್ಷ ಸಹಾಯ ಮಾಡಿದ್ದು, ಗುಡಿಸಿಲಲ್ಲಿ ಇದ್ದ ಕಲಾವತಿ ಆರ್ಸಿಸಿ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಟ್ವೀಟ್ ಮಾಡುವ ಜೊತೆಗೆ ರಾಹುಲ್ ಗಾಂಧಿ ನಮಗೆ ಸಹಾಯ ಮಾಡಿದ್ದಾರೆ ಎಂಬ ಕಲಾವತಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಅಮಿತ್ ಶಾ ನಿನ್ನೆ ಲೋಕಸಭೆಯಲ್ಲಿ ಕಲಾವತಿ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಲೋಕಸಭೆಯಲ್ಲಿರುವ ಒಬ್ಬ ಸದಸ್ಯರನ್ನು 13 ಬಾರಿ ರಾಜಕೀಯಕ್ಕೆ ಲಾಂಚ್ ಮಾಡಲಾಗಿದೆ. ಆದರೆ ಆ 13 ಬಾರಿಯೂ ವಿಫಲರಾಗಿದ್ದಾರೆ. ಇನ್ನು ಆ ನಾಯಕ ಬುಂದೇಲ್ ಖಂಡ್ ನ ಕಲಾವತಿ ಎಂಬ ಮಹಿಳೆಯ ಗುಡಿಸಲಿಗೆ ಹೋಗಿ ಬಂದಿದ್ದೀರಿ. ಆದರೆ ಆ ಬಡ ಮಹಿಳೆಗೆ ನೀವೇನೂ ನೀಡಿದ್ದೀರಿ ನಿಮ್ಮ ಕಾಂಗ್ರೆಸ್ ಸರ್ಕಾರ ಆ ಕಲಾವತಿಗೆ ಏನು ನೀಡಿದೆ.ಮನೆ, ವಿದ್ಯುತ್ ಎಲ್ಲವನ್ನು ಪ್ರಧಾನಿ ಮೋದಿಯವರು ನೀಡಿದ್ದು ಎಂದಿದ್ದರು. ಈ ವಿಚಾರಕ್ಮೆ ಇಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.