ಬೆಂಗಳೂರು : ಬಸವನ ಗುಡಿಗೆ ಇಂದು ಕಣ್ಣು ಹಾಯಿಸಿದಲ್ಲೆಲ್ಲಾ ಕಡಲೆಕಾಯಿ ಕಾಣುತ್ತಿದೆ. ಹೋದಲ್ಲೆಲ್ಲಾ ಜಾತ್ರೆ ಫೀಲ್ ಬರ್ತಿದೆ.. ನೋಡಿದಲ್ಲೆಲ್ಲಾ ಕಲರ್ ಫುಲ್ ಲೈಟ್ ಗಳು ಕಾಣುತ್ತಿವೆ. ಕಾರಣ ಇಂದಿನಿಂದ ಕಡಲೆಕಾಯಿ ಪರಿಷೆ ಆರಂಭವಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬಸವನಗುಡಿ ಕಡಲೆಕಾಯಿ ಪರಿಷೆ ಅಂದ್ರೆ ಎಲ್ಲಿಲ್ಲದ ಖುಷಿ. ಆದ್ರೆ ಈ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಈ ಪರಿಷೆ ನಡೆದಿರಲಿಲ್ಲ. ಈ ಬಾರಿಯೂ ನಡೆಯುತ್ತೋ ಇಲ್ಲವೋ ಎಂಬ ಅನುಮಾನವಿತ್ತು. ಆದ್ರೆ ಅದಕ್ಕೆ ಬ್ರೇಕ್ ಬಿದ್ದಿದ್ದು, ಇಂದು ಅಧಿಕೃತವಾಗಿ ಪರಿಷೆಗೆ ಚಾಲನೆ ಸಿಕ್ಕಿದೆ.
ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯ ರಂಗು ಮತ್ತೆ ಏರಿದ್ದು, ಶಾಸಕ ರವಿ ಸುಬ್ರಮಣ್ಯ, ಉದಯ್ ಬಿ ಗರುಡಚಾರ್ ಇಂದು ಚಾಲನೆ ನೀಡಿದ್ದಾರೆ. ಬಸವನಗುಡಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕೊರೊನಾ ನಿಯಮಗಳೊಂದಿಗೆ ಜಾತ್ರೆ ನಡೆಯುತ್ತಿದೆ.
ಇಂದಿನಿಂದ ಮೂರು ದಿನಗಳ ಕಾಲ ಅಂದ್ರೆ ಡಿಸೆಂಬರ್ 1ರ ವರೆಗೆ ಈ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಕಡಲೆಕಾಯಿ ಮಳಿಗೆಗಳು ಆರಂಭವಾಗಿವೆ. ಜಾತ್ರೆಗೆ ಬಂದ ಜನ ಕಡಲೆಕಾಯಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.