ಕಾರವಾರ: ಹಲಾಲ್ ಆಯ್ತು, ಹಿಜಾಬ್ ಆಯ್ತು ಇದೀಗ ಮಸೀದಿ ಧ್ವನಿವರ್ಧಕಗಳ ಪ್ರಚಾರ ಸದ್ದು ಮಾಡುತ್ತಿದೆ. ಆ ಬಗ್ಗೆ ಸಚಿವ ಈಶ್ವರಪ್ಪ ಒಂದಷ್ಟು ಸಲಹೆಯನ್ನು ಕೊಟ್ಟಿದ್ದಾರೆ.

ಮನೆಯಲ್ಲಿ ಮಸೀದಿ ಮೂಲಕ ಧ್ವನಿವರ್ಧಕದ ಮೂಲಕ ಶಬ್ಧ ಬರುತ್ತಾ ಇದೆ. ಇದಕ್ಕೆ ಶ್ರೀರಾಮ ಸೇನೆ ಇದನ್ನು ನಿಷೇಧಿಸುತ್ತಿದೆ. ಇದು ಸಾಮಾನ್ಯವಾಗಿ ಮುಸ್ಲಿಂ ಮುಖಂಡರನ್ನು ಒಪ್ಪಿಸಿ ಮಾಡಬೇಕು. ಯಾಕಂದ್ರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬುದು ತುಂಬಾ ದಿನಗಳಿಂದ ಕೇಳಿ ಬರುತ್ತಿದೆ. ಮೊದಲಿನಿಂದಲೂ ಅವರಲ್ಲಿ ಈ ಪದ್ಧತಿ ಇದೆ. ಅವರು ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ದೇವರ ಪ್ರಾರ್ಥನೆ ಮಾಡ್ತೀವಿ ಅಂತ ಹೋಗುತ್ತಿರೋದು, ಅವರ ಮಕ್ಕಳಿಗೂ ವಿದ್ಯೆಗೆ ತೊಂದರೆಯಾಗುತ್ತಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.

ಇದು ಸ್ಪರ್ಧೆಯಲ್ಲ. ಮಸೀದಿಯಲ್ಲಿ ಬಹಳ ಜೋರಾಗಿ ಮೈ ಹಾಕಿ ಕೂಗುತ್ತಾರೆ. ಹೀಗಾಗಿ ನಾವೂ ಹನುಮಾನ್ ಚಾಲಿಸವನ್ನ ಮಸೀದಿ ಎದುರು ಹಾಕಬೇಕು ಎಂಬ ಮಾತು ಕೇಳಿ ಬರುತ್ತಿದೆ. ಇದು ಸ್ಪರ್ಧೆಯಲ್ಲ. ಈ ರೀತಿ ಮಸೀದಿಯಲ್ಲಿ ಕೂಗುತ್ತಿರುವುದು ವಿದ್ಯಾರ್ಥಿಗಳು, ರೋಗಿಗಳು, ವಯಸ್ಸಾದವರಿಗೆ ತೊಂದರೆಯಾಗುತ್ತಿದೆ.
ಮಸೀದಿಯಲ್ಲಿ ಧ್ವನಿವರ್ಧಕದ ಮೂಲಕ ಘೋಷಣೆ, ಪೂಜೆ ಮಾಡ್ತೀರಿ ಅಲ್ಲಾನನ್ನ ಕೂಗ್ತೀರಿ, ನಾನು ಆ ಬಗ್ಗೆ ವಿರೋಧ ಮಾಡಲ್ಲ. ಆದರೆ ನೀವೂ ಈ ರೀತಿ ಮಾಡ್ತೀರಿ ಅಂತ ದೇವಸ್ಥಾನಗಳಲ್ಲಿ ದೊಡ್ಡ ಮೈಕ್ ಹಾಕಿದ್ರೆ, ಮಸೀದಿಗಳ ಮೈಕ್ ಹಾಕಿದರೆ, ಚರ್ಚ್ ಗಳಲ್ಲೂ ದೊಡ್ಡ ದೊಡ್ಡ ಮೈಕ್ ಹಾಕಿಕೊಂಡು ಕುಳಿತುಕೊಂಡರೆ ಇದು ಧರ್ಮ ಧರ್ಮಗಳ ನಡುವೆ ಸಂಘರ್ಷವಾಗುತ್ತೆ. ಸಂಘರ್ಷವಾಗುವುದಕ್ಕಿಂತಲೂ ಮುಸಲ್ಮಾನ ನಾಯಕರು ಯಾರಿದ್ದಾರೆ, ಅವರೇ ಈ ಬಗ್ಗೆ ಯೋಚನೆ ಮಾಡಿ ಬೇರೆಯವರಿಗೆ ತೊಂದರೆಯಾಗದಂತೆ ಮಸೀದಿ ಒಳಗೆ ಮಾಡಿಕೊಳ್ಳುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

