ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಿದ್ದು, ಈ ವೇಳೆ ತಮ್ಮ ಭಾಷಣದಲ್ಲಿ ಧರ್ಮ, ದೇಶದ ಬಗ್ಗೆ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. ಜೀವನದಲ್ಲಿ ಇವತ್ತಿನಿಂದ ವೇದಿಕೆ ಮೇಲೆ ಒಂದು ಪ್ರತಿಜ್ಞೆ ಮಾಡುತ್ತೇನೆ. ಜಾತಿಯ ಬಗ್ಗೆ ಇಲ್ಲ ದೇಶವನ್ನ, ಧರ್ಮವನ್ನ ಉಳಿಸ್ತೀನಿ ಅಂತ ಪ್ರತಿಜ್ಞೆ ಮಾಡುತ್ತೇನೆ. ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿ, ಪ್ರಾಣವನ್ನು ಬಲಿದಾನ ಮಾಡಿ, ಅವರೆಲ್ಲರೂ ಇವತ್ತು ಸ್ವರ್ಗದಲ್ಲಿದ್ದಾರೆ. ಅವರ್ಯಾರಿಗೂ ಆತ್ಮಕ್ಕೆ ತೃಪ್ತಿ ಇಲ್ಲ. ಸ್ವರ್ಗದಲ್ಲಿರುವ ಸ್ವತಂತ್ರ್ಯ ಹೋರಾಟಗಾರರಿಗೆ ಸಮಾಧಾನವಿಲ್ಲ. ಇಂದು ಜಾತಿಗೋಸ್ಕರ ಬಡಿದಾಡುತ್ತೀವಿ ಅಂದ್ರೆ ನಾವ್ಯಾಕೆ ಬಲಿದಾನ ಮಾಡಬೇಕಿತ್ತು ಅಂತ ಬಹಳ ಚಿಂತೆಯಲ್ಲಿದ್ದಾರೆ.
ಇವತ್ತು 1008 ಸ್ವಾಮಿಗಳ ಪಾದವನ್ನು ಮುಟ್ಟಿ, ವೇದಿಕೆ ಮೇಲಿನ ಸ್ವಾಮೀಜಿಗಳು ಸೇರಿ ಸಾವಿರಾರು ಸ್ವಾಮಿಗಳಿದ್ದಾರೆ. ಇವತ್ತು ನಾವೂ ಪ್ರತಿಜ್ಞೆ ಮಾಡೋಣಾ ಈ ದೇಶವನ್ನು, ಧರ್ಮವನ್ನು ಜಾತಿ ಬಿಟ್ಟು ಪಕ್ಷ ಬಿಟ್ಟು ಉಳಿಸ್ತೇವೆ ಎಂದು. ಬೇರೆಯವರು ಜಾತಿಯನ್ನು ಫಾಲೋ ಮಾಡಿದರೆ ನಾವೂ ಉದಾರವಾಗಿ ಹೋದರೆ ಅವರು ನಮ್ಮಿಂದ ಕಲಿಯುತ್ತಾರೆ. ನಾವೆಲ್ಲರೂ ಧರ್ಮ ಧರ್ಮ ಎಂಬುದನ್ನ ಮರೆತಿದ್ದೀವಿ. ಗೋವು ನಮ್ಮೆಲ್ಲರ ಗೋಮಾತೆ. ಇಂದು ಗೋಮಾತೆಯ ಪರಿಸ್ಥಿತಿ ಏನಾಗಿದೆ. ಚಾಮರಾಜಪೇಟೆಯಲ್ಲಿ ಕೆಚ್ಚಲನ್ನ ಕಟ್ ಮಾಡಿದ್ದಾರೆ, ಗೋವನ್ನ ಕಡಿದು ಮಾಂಸ ಮಾರಾಟ ಮಾಡ್ತಾ ಇದಾರೆ. ಕಣ್ಣೆದುರಿಗೆ ಗೋವಿನ ಬಾಲ ಕಟ್ ಮಾಡುತ್ತಿದ್ದಾರೆ.
ಇದೆಲ್ಲವನ್ನು ನೋಡಿಕೊಂಡು ಸುಮ್ಮನೆ ಕೂತರೆ ನಾವೂ ಬದುಕಿದ್ದು ಸತ್ತಂಗೆ. ಇನ್ಮುಂದೆ ನಮ್ಮ ಗೋಮಾತೆಯನ್ನ ಯಾರಾದ್ರೂ ಕಡಿದರೆ ನಾವೂ ತೀರ್ಮಾನ ಮಾಡೋಣಾ ಅವರ ಕೈಯನ್ನ ನಾವೂ ಕಡಿಯುತ್ತೇವೆ ಎಂಬುದರ ಪಣ ತೊಡೋಣಾ. ಗೋಮಾತೆಯನ್ನು ಕಡಿಯುತ್ತಾರೆ ಅಂದ್ರೆ ಯಾಕ್ರೀ ನಾವೂ ಬದುಕಿರಬೇಕು ಎಂದು ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದಾರೆ.