ಕೆ. ಬನ್ನೆಮ್ಮ ನಿಧನ

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್.08 : ನಗರದ ಜೆ.ಸಿ.ಆರ್. ಬಡಾವಣೆಯ ನಿವಾಸಿ ಬನ್ನೆಮ್ಮ(84) ಇಂದು (ಗುರುವಾರ) ನಿಧನರಾದರು.

ಮೃತರು ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಕೆ.ತಿಪ್ಪೇಸ್ವಾಮಿ ಅವರ ಮಾತೃಶ್ರೀಯವರಾಗಿದ್ದು, ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ನಾಳೆ (10-11-2023ರಂದು) ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲ್ಲೂಕಿನ ಚೋರನೂರು ಗ್ರಾಮದಲ್ಲಿ ನಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ : ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ತಿಪ್ಪೇಶಿಚಾರ್, ಉಪನ್ಯಾಸಕರಾದ ದೊಡ್ಡಯ್ಯ, ಡಾ|| ಕೃಷ್ಣಪ್ಪ, ಡಾ|| ಮೋಹನ್, ಡಾ|| ಗುರುನಾಥ, ಚನ್ನಬಸಪ್ಪ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘದ ಸದಸ್ಯರು ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *