ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06 : ನ್ಯಾ. ನಾಗಮೋಹನ್ ದಾಸ್ ವರದಿ ಕುರಿತು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋರಿಕೆ ಯಾಗಿರುವ ವರದಿಯ ಅಂಶಗಳನ್ನು ಕಂಡು ಆತಂಕವಾಗಿದೆ. ಸಂವಿಧಾನಿಕವಾಗಿ ಸ್ಪರ್ಶ, ಅಸ್ಪೃಶ್ಯ ಎಂಬ ಶಬ್ದಗಳನ್ನು ಬಳಸಿರುವುದು ತುಂಬಾ ನೋವಿನ ಸಂಗತಿ, ಸಮಾನ ಸಹೋದರ ಜಾತಿಗಳನ್ನು ಚಿದ್ರಗೊಳಿಸಿರುವುದು ಕಂಡು ಬಂದಿದೆ. ಆಯೋಗ ರಚನೆಯ ಮೂಲ ಉದ್ದೇಶವನ್ನು ಮರೆತಿರುವ ಅನುಮಾನವಿದೆ. ಹೀಗಾಗಿ ಏಕಪಕ್ಷೀಯವಾಗಿ ಈ ವರದಿಯನ್ನು ಅಂಗೀಕಾರ ಮಾಡಬಾರದು. ಸಾರ್ವಜನಿಕ ಚರ್ಚೆಗೆ ಬಿಡಬೇಕು. ಸಮುದಾಯದ ಆಕ್ಷೇಪಣೆ ಸ್ವೀಕರಿಸಲು ಮೂರು ತಿಂಗಳ ಅವಕಾಶ ನೀಡಬೇಕು. ಜನಸಂಖ್ಯೆವಾರು ಮೀಸಲಾತಿ ನಿಗದಿ ಮಾಡಬೇಕು. ಪರಿಶಿಷ್ಟರ ಐಕ್ಯತೆ ಕಾಪಾಡಬೇಕು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ರಾಜರ್ಷಿ ಶಾಹು ಮಹಾರಾಜ್ ನೀಡಿದ ಮೀಸಲಾತಿ ಹಾಗೂ ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಾಗಿದೆ.
ಮೀಸಲಾತಿ ವಿಷಯದಲ್ಲಿ ಸ್ಪರ್ಶ ಹಾಗೂ ಅಸ್ಪೃಶ್ಯ ಪದಗಳು ಅಸಾಂವಿಧಾನಿಕ ಪದಗಳಾಗಿವೆ. ಪ್ರವರ್ಗ-1, ಪ್ರವರ್ಗ-2(ಎ),ಪ್ರವರ್ಗ-2(ಬಿ),ಪ್ರವರ್ಗ-3(ಎ),ಪ್ರವರ್ಗ-3(ಬಿ) ಮತ್ತು ಪರಿಶಿಷ್ಟ ವರ್ಗ ಕ್ಕೆ ನೀಡಲಾಗಿರುವ ಮೀಸಲಾತಿಯನ್ನು ಸ್ಪರ್ಶ ಹಾಗೂ ಅಸ್ಪೃಶ್ಯ ಹಿನ್ನೆಲೆಯಲ್ಲಿ ನೋಡಬೇಕಾ ?. ಹಾಗಾಗಿ ಸ್ಪರ್ಶ ಹಾಗೂ ಅಸ್ಪೃಶ್ಯ ಪದ ಪ್ರಯೋಗಕ್ಕೆ ವಿರೋಧವಿದೆ.
ನ್ಯಾ. ನಾಗಮೋಹನ್ ದಾಸ್ ವರದಿ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು.ತಕರಾರು ಅರ್ಜಿ ಹಾಗೂ ಅಹವಾಲು ಸ್ವೀಕರಿಸಲು ಅವಕಾಶ ಕಲ್ಪಿಸಬೇಕು.
2011ರ ರಾಜ್ಯದ ಜನಂಖ್ಯೆ 6.ಕೋಟಿ
2011ರ ಪರಿಶಿಷ್ಟ ಜಾತಿ ಜನಸಂಖ್ಯೆ 1.ಕೋಟಿ 08ಲಕ್ಷ
2025ರ ರಾಜ್ಯದ ಜನಂಖ್ಯೆ 6.ಕೋಟಿ 80ಲಕ್ಷ ಅರ್ಥಾತ್ ಶೇಖಡ 16% ಹೆಚ್ಚಾಗಿದೆ.
2025ರ ಪರಿಶಿಷ್ಟ ಜಾತಿ ಜನಸಂಖ್ಯೆ 1.ಕೋಟಿ 25ಲಕ್ಶ ಗಡಿ ದಾಡಿರಬೇಕು ಆದರೆ ಆಯೋಗದ ಸಮೀಕ್ಷೆ 1 ಕೋಟಿ 7 ಲಕ್ಷ ಜನ ಸಮೀಕ್ಷೆ ಪಡೆದಿದೆ. ಹೀಗಾಗಿ ಇದು ನಿಖರವಾದ ಸಮೀಕ್ಷೆಯಾಗಿಲ್ಲ.
ವಿಶೇಷ ಅಧಿವೇಶನ ಕರೆದು, 224 ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಪ್ರತ್ಯೇಕ ಅಬಿಪ್ರಾಯ ಪಡೆಯಬೇಕು.
ಕೇಂದ್ರ ಸರ್ಕಾರದ ಜಾತಿಗಣತಿ ನಂತರ ತೌಲನಿಕ ಅಧ್ಯಯನ ನಡೆಸಬೇಕು.
ಕಾಂಗ್ರೆಸ್ ಸರ್ಕಾರ ರಚನೆಗೆ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯ ಶಕ್ತಿ ಹೆಚ್ಚಿದೆ. ಈ ಸಮುದಾಯಗಳ ಶಕ್ತಿ ಕುಂದಿಸುವ ಕಾರ್ಯ ಸರ್ಕಾರ ಮಾಡಬಾರದು.
ಭೋವಿ ಬಂಜಾರ ಕೊರಮ ಕೊರಚ ಜಾತಿಗಳಿಗೆ 4% ನೀಡಿದರೆ ಅನ್ಯಾಯವಾಗುತ್ತದೆ. ಹಿಂದುಳಿದಿರುವಿಕೆ ಆಧಾರದ ಮೇಲೆ ಶೇಖಡವಾರು ಹೆಚ್ಚಿಸಬೇಕು.
ವೈಜ್ಞಾನಿಕ ಒಳಮೀಸಲಾತಿಯಲ್ಲಿ 101 ಜಾತಿಗಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


