ಪ್ಯಾರೀಸ್ ಒಲಂಪಿಕ್ ನಲ್ಲಿ ಭಾರತಕ್ಕೆ 5ನೇ ಪದಕ ಲಭಿಸಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿನ್ನದ ಪದಕದ ಕಡೆಗೆ ಗಮನ ನೀಡಿದ್ದರು. ಆದರೆ ಈ ಬಾರಿ ಮಿಸ್ ಆಗಿದೆ. ಪಾಕಿಸ್ತಾನಿ ಅಥ್ಲಿಟ್ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದಿದ್ದಾರೆ. ಅಂದ ಹಾಗೇ ನೀರಜ್ ಚೋಪ್ರಾ ಹಾಗೂ ನದೀಮ್ ನಡುವೆ 2016ರಿಂದಾನೂ ಪೈಪೋಟಿ ನಡೆಯುತ್ತಿದೆ. 2022ರಲ್ಲೂ ನದೀಮ್ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ, ನದೀಮ್ ಚಿನ್ನದ ಪದಕ ಗೆದ್ದು ಬಿಟ್ಟಿದ್ದಾರೆ.
ಈ ಬಗ್ಗೆ ನೀರಜ್ ಚೋಪ್ರಾ ತಂದೆ ಸತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಯೊಬ್ಬರಿಗೂ ಒಂದು ದಿನವಿದೆ. ಇಂದು ಪಾಕಿಸ್ತಾನದ ದಿನ. ಆದರೆ ನಾವೂ ಬೆಳ್ಳಿ ಪದಕ ಗೆದ್ದಿರುವುದು ಹೆಮ್ಮೆ ತಂದಿದೆ. ಮಗನಿಗೆ ಮೊದಲೇ ಗಾಯವಾಗಿತ್ತು. ಆ ಗಾಯದಿಂದ ಚಿನ್ನ ಗೆಲ್ಲಲು ಹಿನ್ನಡೆಯಾಗಿರಬಹುದು. ನಮಗೆ ತುಂಬಾ ಖುಷಿಯಾಗುತ್ತಿದೆ. ನಮಗೆ ಬೆಳ್ಳಿಯೂ ಬಂಗಾರಕ್ಕೆ ಸಮಾನ ಎಂದಿದ್ದಾರೆ.
ಇನ್ನು ನೀರಜ್ ಚೋಪ್ರಾ ತಾಯಿ ಸರೋಜಾ ದೇವಿ ಮಾತನಾಡಿ, ನಾವೂ ಬೆಳ್ಳಿಯಿಂದ ಸಂತೋಷವಾಗಿದ್ದೇವೆ. ಚಿನ್ನ ಪಡೆದವನು ಕೂಡ ನಮ್ಮ ಮಗನೆ ಎಂದಿದ್ದಾರೆ. ನೀರಜ್ ಚೋಪ್ರಾ ಭಾರತಕ್ಕೆ ಚಿನ್ನ ತರಲೆಂದು ಸತತ ಎರಡು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ. ಫಿನ್ ಲ್ಯಾಂಡ್ ಹಾಗೂ ಜರ್ಮನಿಯಲ್ಲೂ ತಯಾರಿ ನಡೆಸಿದ್ದರು. ಆದರೆ ಕಡೆ ಗಳಿಗೆಯಲ್ಲಿ ಚಿನ್ನ ಮಿಸ್ ಆಗಿದೆ. ಬೆಳ್ಳಿ ಬಂದಿದ್ದಕ್ಕೆ ಮನೆಯವರೆಲ್ಲ ಸಂಭ್ರಮಾಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನು ಪಾಕಿಸ್ತಾನ ಈ ಬಾರಿಯ ಒಲಂಪಿಕ್ಸ್ ನಲ್ಲಿ ಮೊದಲ ಚಿನ್ನವನ್ನು ಗೆದ್ದಿದೆ.