ಏನಿದು ತೋಟಕ್ಕೆ ಹೋಗಿ ಬಂದಾಕ್ಷಣಾ ಹೇಗೆ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತೆ ಅಂತ ಯೋಚಿಸ್ತಾ ಇದ್ದೀರಾ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದೆ ಓದಿ. ಇದನ್ನ ನೀವೂ ತಪ್ಪದೇ ಪಾಲಿಸಿದರೆ ಕಿಡ್ನಿ ಸ್ಟೋನ್ ಇರಲ್ಲ. ಹಾಗೇ ಕಿಡ್ನಿ ಸ್ಟೋನ್ ಇಲ್ಲದೆ ಇರುವವರು ಕೂಡ ಬಾಳೆ ತೋಟಕ್ಕೆ ಹೋಗಿ ಬರಬಹುದು. ಅದರಿಂದ ದೇಹಕ್ಕೆ ಬೇಕಾದ ಐರನ್ ಕಂಟೆಂಟ್ ಸಿಗಲಿದೆ.
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಅನ್ನೋದು ಕೂಡ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿ ಬಿಟ್ಟಿದೆ. ಚಿಕ್ಕ ಚಿಕ್ಕ ಮಕ್ಕಳಿಗೂ ಕಿಡ್ನಿ ಸ್ಟೋನ್ ಆಗಿ ಆಪರೇಷನ್ ಆಗಿರುತ್ತದೆ. ಮಾತ್ರೆಗಳನ್ನ ತೆಗೆದುಕೊಳ್ಳುವುದು ಇನ್ನು ಡೇಂಜರ್. ಇದಕ್ಕೆಲ್ಲ ಕಾರಣ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಯದೆ ಇರುವುದು. ಇದಕ್ಕೆ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಈ ರೋಗವನ್ನು ಕಳೆದುಕೊಳ್ಳಬಹುದು.
ಬಾಳೆ ದಿಂಡಿನ ಪಲ್ಯ, ಬಾಳೆ ದಿಂಡಿನ ಜ್ಯೂಸ್ ಅನ್ನ ಕುಡಿಯುವುದರಿಂದ ಕಿಡ್ನಿ ಸ್ಟೋನ್ ನಿಂದ ಪರಿಹಾರ ಪಡೆಯಬಹುದು. ವಾರಕ್ಕೆ ಒಮ್ಮೆಯಾದರೂ ಬಾಳೆ ದಿಂಡಿನ ಪಲ್ಯವನ್ನು ಮಾಡಿಕೊಂಡು ತಿನ್ನುವುದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗಲಿದೆ. ಈ ಪಲ್ಯವನ್ನು ಹಾಗೆಯೇ ತಿನ್ನಬಹುದು. ಪಲ್ಯ ಮಾಡುವುದಕ್ಕೆ ಅಗದೆ ಇದ್ದರೆ ಜ್ಯೂಸ್ ಅನ್ನು ಮಾಡಿಕೊಂಡು ಕುಡಿಯಬಹುದು. ಬಾಳೆದಿಂಡನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿ. ಅದರ ರಸಕ್ಕೆ ನೀರು ಹಾಕದೆ ಕುಡಿಯಿರಿ. ಇದರಲ್ಲಿ ಕಬ್ಬಿಣಾಂಶ ಇರುವುದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗಲಿದೆ.
ಸರಿಯಾಗಿ ನೀರು ಕುಡಿಯದೆ ಇದ್ದರೆ ಕಿಡ್ನಿ ಸ್ಟೋನ್ ಆಗಲಿದೆ. ಕಿಡ್ನಿ ಸ್ಟೋನ್ ಆಗದಂತೆ ನೋಡಿಕೊಳ್ಳಲು ಆದಷ್ಟು ಲಿಕ್ವಿಡ್ ಇರುವ ಆಹಾರವನ್ನ ದೇಹಕ್ಕೆ ಸೇರಿಸುತ್ತಾ ಇರಿ. ನೀರು, ಜ್ಯೂಸ್ ಹೀಗೆ ಆಗಾಗ ನೀರಿನಂಶವನ್ನ ಹೆಚ್ಚಾಗಿ ಸೇವಿಸಿ.