ಸುದ್ದಿಒನ್ : ಪ್ರಸ್ತುತ ದೇಶದಾದ್ಯಂತ ಚರ್ಚೆಯಾಗುತ್ತಿರುವ ಬಾರೀ ಸುದ್ದಿಯೆಂದರೆ ಅದು ಅಯೋಧ್ಯೆಯ ರಾಮಮಂದಿರದಲ್ಲಿ ಹಿಂದೂಗಳ ಆರಾಧ್ಯ ದೈವ ಶ್ರೀ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಕುರಿತ ವಿಚಾರ. ಜನವರಿ 22 ರಂದು ನಡೆಯುವ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಶ್ರೀರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಅಯೋಧ್ಯೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಅಂದು 5 ಲಕ್ಷಕ್ಕೂ ಹೆಚ್ಚು ರಾಮನ ಭಕ್ತರು ಅಯೋಧ್ಯೆ ತಲುಪಲಿದ್ದಾರೆ. ಹೋಟೆಲ್ ಬುಕಿಂಗ್ ಈಗಾಗಲೇ ಭರ್ತಿಯಾಗಿದೆ. ಈ ಬೇಡಿಕೆಯನ್ನು ಅವಕಾಶವನ್ನಾಗಿ ಮಾಡಿಕೊಂಡು ಹೆಚ್ಚಿನ ದರಕ್ಕೆ ಬುಕಿಂಗ್ ಮಾಡುತ್ತಿದ್ದಾರೆ. ಒಂದು ರಾತ್ರಿಯ ತಂಗಲು ಕೊಠಡಿ ದರಗಳು ಏಕಾಏಕಿ ಹೆಚ್ಚಾಗಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಈ ದರಗಳು 1 ಲಕ್ಷ ರೂ.ಗಿಂತ ಹೆಚ್ಚಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮೇಕ್ ಮೈ ಟ್ರಿಪ್ ಮತ್ತು ಬುಕ್ಕಿಂಗ್ ಡಾಟ್ ಕಾಮ್‌ನಂತಹ ಆನ್‌ಲೈನ್ ಟ್ರಾವೆಲ್ ವೆಬ್‌ಸೈಟ್‌ಗಳು ಈಗಾಗಲೇ ಹೋಟೆಲ್ ಬುಕಿಂಗ್ ಅನ್ನು ಪೂರ್ಣವಾಗಿವೆ ಎಂದು ತೋರಿಸುತ್ತಿವೆ.
ಬುಕ್ಕಿಂಗ್ ವೆಬ್‌ಸೈಟ್‌ಗಳು ಹೋಟೆಲ್ ಕೊಠಡಿಗಳು ಬಹಳ ವೇಗವಾಗಿ ಭರ್ತಿಯಾಗುತ್ತಿವೆ ಎಂದು ಹೇಳುತ್ತಿವೆ. ಕೆಲವೇ ಕೊಠಡಿಗಳು ಲಭ್ಯವಿವೆ ಎಂದು ತೋರಿಸುತ್ತಿವೆ. ಇದರಿಂದಾಗಿ ಹೋಟೆಲ್ ರೂಂಗಳ ಬೆಲೆ ಗಗನಕ್ಕೇರುತ್ತಿದೆ. ಕೆಲವು ಹೋಟೆಲ್‌ಗಳು ಜನವರಿ 20 ಮತ್ತು ಜನವರಿ 22 ರ ನಡುವೆ ಮಾಡಿದ ಬುಕಿಂಗ್‌ಗಳನ್ನು ರದ್ದುಗೊಳಿಸುವ ಸೌಲಭ್ಯವನ್ನು ತೆಗೆದುಹಾಕಿವೆ. ಅಯೋಧ್ಯೆಯ ಪ್ರಸಿದ್ಧ ಹೋಟೆಲ್ ಇನ್ ರಾಡಿಸನ್‌ನಲ್ಲಿರುವ ಕೊಠಡಿಗಳ ಬೆಲೆಗಳು ಗಗನಕ್ಕೇರುತ್ತಿವೆ.
ಒಂದು ರಾತ್ರಿಯ ತಂಗಲು ರೂ.1 ಲಕ್ಷಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಲ್ಲದೆ, ರಾಮಾಯಣ ಹೋಟೆಲ್‌ನಲ್ಲಿ ರೂಮ್ ದರಗಳು ಒಂದು ದಿನಕ್ಕೆ ರೂ. 40 ಸಾವಿರದವರೆಗೂ ಇದೆ ಎನ್ನಲಾಗಿದೆ.
ಈ ವರ್ಷ ಹೋಟೆಲ್ ಬುಕ್ಕಿಂಗ್ ನಲ್ಲಿ 5 ಪಟ್ಟು ಹೆಚ್ಚಳವಾಗಿದೆ ಎಂದು ಮೇಕ್ ಮೈ ಟ್ರಿಪ್ ಸಿಇಒ ರಾಜೇಶ್ ಮಾಗೊ ತಿಳಿಸಿದ್ದಾರೆ. ದೇಶದ ಟಾಪ್ 10 ಆಧ್ಯಾತ್ಮಿಕ ಸ್ಥಳಗಳಲ್ಲಿ ಅಯೋಧ್ಯೆ ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತದೆ.
ಮತ್ತೊಂದೆಡೆ, ಅಯೋಧ್ಯೆ ರಾಮಮಂದಿರ ಉದ್ಘಾಟನೆ ಮತ್ತು ರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಎಲ್ಲಾ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ ಎಂದು ಈಸಿ ಮೈ ಟ್ರಿಪ್ ಹೇಳಿದೆ. ಆಕ್ಯುಪೆನ್ಸಿ ರೇಟ್ ಶೇ.80ರಿಂದ ಶೇ.100ರಷ್ಟಿದೆ ಎಂದು ಹೇಳಲಾಗುತ್ತಿದ್ದು, ಇದರಿಂದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಬಹುತೇಕ ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಮತ್ತು ಬೆಲೆಗಳು ಸಹ ಹೆಚ್ಚಾಗಿದೆ ಎಂದು ಅಯೋಧ್ಯೆ ಸಿಗ್ನೆಟ್ ಕಲೆಕ್ಷನ್ ಹೊಟೇಲ್‌ಗಳು ಹೇಳಿವೆ. ಪ್ರತಿ ಕೊಠಡಿಯ ಬೆಲೆ ಸುಮಾರು ರೂ. 70 ಸಾವಿರದವರೆಗೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ಪ್ರವಾಸಿಗರ ಸಂಖ್ಯೆಯಲ್ಲಿ ಅಯೋಧ್ಯೆ ಗೋವಾ ಮತ್ತು ನೈನಿತಾಲ್ ಅನ್ನು ಹಿಂದಿಕ್ಕಿದೆ. ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪ್ರಸ್ತುತ ಅಯೋಧ್ಯೆ ನೆಚ್ಚಿನ ಪ್ರವಾಸಿ ತಾಣಗಳಾಗಿದೆ. Oyo Apps ಬುಕಿಂಗ್‌ನಲ್ಲಿ, ಅಯೋಧ್ಯೆಯಲ್ಲಿ 70 ಪ್ರತಿಶತದಷ್ಟು ಮತ್ತು ಗೋವಾದಲ್ಲಿ 50 ಪ್ರತಿಶತದಷ್ಟು ಬೆಳವಣಿಗೆಯಾಗಿದೆ. ನೈನಿತಾಲ್‌ನಲ್ಲಿ OYO ಬುಕ್ಕಿಂಗ್‌ಗಳ ಬೆಳವಣಿಗೆಯು ಶೇಕಡಾ 60 ರಷ್ಟಿದೆ ಎಂದು Oyo ಸಂಸ್ಥಾಪಕ ರಿತೇಶ್ ಅಗರ್ವಾಲ್ ಕೆಲವು ದಿನಗಳ ಹಿಂದೆ ಹೇಳಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಬೃಹತ್ ಆಗಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ.