ಬೆಂಗಳೂರು : ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಮಠದ ಶಿವಮೂರ್ತಿ ಶ್ರೀಗಳು ಬಂಧನದಲ್ಲಿದ್ದಾರೆ. ದಾಖಲಾಗಿದ್ದ ಒಂದು ಕೇಸಲ್ಲಿ ಶ್ರೀಗಳಿಗೆ ಷರತ್ತು ಬದ್ಧ ಜಾಮೀನು ಕೂಡ ಸಿಕ್ಕಿದೆ. ಆದರೆ ಬಿಡುಗಡೆಯ ಭಾಗ್ಯವಿಲ್ಲ. ಶ್ರೀಗಳಿಗೆ ಜಾಮೀನು ಸಿಕ್ಕಿರುವ ವಿಚಾರಕ್ಕೆ ಮೈಸೂರು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿದ್ದು, ಜಾಮೀನು ಸಿಕ್ಕಾಕ್ಷಣ ನ್ಯಾಯ ಸಿಗಲ್ಲ ಅಂತಲ್ಲ ಎಂದಿದ್ದಾರೆ.
ಜಾಮೀನು ಸಿಕ್ಕ ಮಾತ್ರಕ್ಕೆ ಅವರಿಗೆ ಬಲ ಬಂದಿದೆ ಅಂತಲ್ಲ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ಮುರುಘಾಶ್ರೀಗೆ ಖಂಡಿತವಾಗಿಯೂ ಶಿಕ್ಷೆ ಆಗಿಯೇ ಆಗುತ್ತೆ. ಮತ್ತೊಂದು ಕೇಸಲ್ಲಿ ಜಾಮೀನು ಸಿಗದಂತೆ ಹೋರಾಟ ಮಾಡುತ್ತೇವೆ. ಚಿಕ್ಕಮಕ್ಕಳು ಸಾಕಷ್ಟು ನೊಂದಿದ್ದಾರೆ. ಅವರ ಪರವಾಗಿ ನಾವಿದ್ದೇವೆ. ಮುರುಘಾಶ್ರೀಗೆ ಖಂಡಿತ ಶಿಕ್ಷೆಯಾಗುತ್ತೆ ಎಂದಿದ್ದಾರೆ.
ಹಾಸ್ಟೆಲ್‌ನ ಅಪ್ರಾಪ್ತರ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಶ್ರೀಗಳ ವಿರುದ್ಧ 2022 ರ ಆಗಸ್ಟ್‌ನಲ್ಲಿ ಕೇಸ್ ದಾಖಲಾಗಿತ್ತು. 2022 ರ ಸೆಪ್ಟಂಬರ್ 1 ರಂದು ಶ್ರೀಗಳನ್ನ ಅರೆಸ್ಟ್ ಮಾಡಲಾಗಿತ್ತು. 433 ದಿನಗಳಿಂದ ಜೈಲಿನಲ್ಲಿರೋ ಶ್ರೀಗಳಿಗೆ ಹೈಕೋರ್ಟ್ ಇವತ್ತು ಜಾಮೀನು ಮಂಜೂರು ಮಾಡಿದೆ. ಶ್ರೀಗಳ ವಿರುದ್ಧ ಎರಡು ಕೇಸ್ ದಾಖಲಾಗಿದ್ದು, ಮೊದಲ ಕೇಸ್‌ನಲ್ಲಿ ಮಾತ್ರ ಬೇಲ್ ಸಿಕ್ಕಿದೆ . ಅದು ಕೂಡ ಷರತ್ತು ಬದ್ಧ ಜಾಮೀನು. ಚಿತ್ರದುರ್ಗ ಪ್ರವೇಶ ಮಾಡದಂತೆ ಜಾಮೀನು ನೀಡಿದೆ.