ಸಿನೆಮಾ ಸೆಟ್ಟೇರುವ ಮೊದಲೇ ಕ್ರೇಜ್ ಹುಟ್ಟಿಸಿದ ಹೊಸಬರ ‘ಜುಗಲ್ ಬಂದಿ’

1 Min Read

ಬೆಂಗಳೂರು :  ಈಗಂತೂ ತರಹೇವಾರಿ ಕಥಾಹಂದರ ಹೊತ್ತ ಹೊಸಬರ ಸಿನೆಮಾಗಳು ಸೆಟ್ಟೇರುತ್ತಲೇ ಇರ್ತಾವೆ. ಎಲ್ಲಾ ಸಿನಿಮಾಗಳು ಸೌಂಡ್ ಮಾಡ್ತಾವೆ ಅನ್ನೋಕೆ ಆಗೊಲ್ಲ. ಆದ್ರೆ ಕೆಲ ಸಿನಿಮಾಗಳು ಶುರುವಾಗೋ ಮುಂಚೆನೇ ಸಖತ್ ಡಿಮ್ಯಾಂಡ್ ಸೃಷ್ಟಿಸಿರುತ್ತೆ. ಆ ಸಾಲಿಗೆ ಸೇರುವ ಸಿನಿಮಾ ಜುಗಲ್ ಬಂದಿ. ಇತ್ತೀಚೆಗಷ್ಟೇ ಫಸ್ಟ್ ಲುಕ್ ರಿಲೀಸ್ ಮಾಡಿ ಭರವಸೆ ಹುಟ್ಟು ಹಾಕಿದ್ದ ಹೊಸಬರ ಜುಗಲ್ ಬಂದಿ ಸಿನೆಮಾ ಸೆಟ್ಟೇರುವ ಮುಂಚೆ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಮಾಡಿಕೊಂಡಿರುವ ಸಂತಸದಲ್ಲಿದೆ.

ಹೌದು, ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ದಿವಾಕರ್ ಈಗ ಜುಗಲ್ ಬಂದಿ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯೋದ್ರ ಜೊತೆಗೆ ಡಿಂಡಿಮ ಪ್ರೊಡಕ್ಷನ್ ನಡಿ ತಯಾರಾಗ್ತಿರೋ ಸಿನೆಮಾಗೆ ಬಂಡವಾಳವನ್ನೂ ಹೂಡುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ  ಸಿನಿಮಾ ಮುಹೂರ್ತ ನೆರೆವೇರಿಸಿಕೊಂಡಿದ್ದು, ಈ ಅದ್ದೂರಿ ಕಾರ್ಯಕ್ರಮದಲ್ಲಿ  ಚಿತ್ರದ ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್  ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ, ಮಾನಸಿ ಸುಧೀರ್, ನಿರ್ದೇಶಕ ದಿವಾಕರ್ ಡಿಂಡಿಮ ಮುಂತಾದವರು ಭಾಗಿಯಾಗಿದ್ದರು. ಥ್ರಿಲ್ಲರ್ ಕಥಾಹಂದರ ಹೊಂದಿರುವ ಜುಗಲ್ ಬಂದಿ ಸಿನಿಮಾ ಇದೇ ತಿಂಗಳಿನಿಂದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿದೆ. ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನಿರ್ದೇಶನ, ಎಸ್. ಕೆ ರಾವ್ ಛಾಯಾಗ್ರಹಣ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *