ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 19 : ನಾಲ್ಕು ವರ್ಷಗಳಿಗೊಮ್ಮೆ ಮದಕರಿಪುರದಲ್ಲಿ ನಡೆಯುವ ಸೇವಾಲಾಲ್ ಮರಿಯಮ್ಮ ಜಾತ್ರೆಗೆ ಹೈಕೋರ್ಟ್ ನ್ಯಾಯಾಧೀಶರಾದ ವೆಂಕಟೇಶ್‍ನಾಯ್ಕ ಬುಧವಾರ ಚಾಲನೆ ನೀಡಿದರು.

ಗೋಧಿ ಮೊಳಕೆ(ಥೀಸ್) ಕೀಳುವ ಮೂಲಕ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶರಾದ ವೆಂಕಟೇಶ್‍ನಾಯ್ಕ 4 ವರ್ಷಗಳಿಗೊಮ್ಮೆ ಮದಕರಿಪುರದಲ್ಲಿ ಸೇವಾಲಾಲ್ ಮರಿಯಮ್ಮ ಜಾತ್ರೆ ಅತ್ಯಂತ ವಿಜೃಂಭಣೆ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಅವಿವಾಹಿತ ಯುವತಿಯರು ಹತ್ತು ದಿನಗಳ ಕಾಲ ವ್ರತ ಆಚರಿಸಿ ಬೆಳೆಸುವ ಗೋಧಿ ಮೊಳಕೆ ಹಸಿರು ಪ್ರಕೃತಿಯ ಸಂಕೇತ. ಪರಿಸರ ಹಚ್ಚ ಹಸಿರಿನಿಂದ ಕೂಡಿದ್ದರೆ ಸಕಲ ಜೀವರಾಶಿಗಳು ನೆಮ್ಮದಿಯಿಂದ ಬದುಕುತ್ತವೆ ಎಂದು ಹೇಳಿದರು.
ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಧರ್ಮದರ್ಶಿ ಕಮಿಟಿ ಗೌರವಾಧ್ಯಕ್ಷ ಹಾಲಾನಾಯ್ಕ, ಶಿವಾನಾಯ್ಕ, ಶ್ರೀನಿವಾಸ್‍ನಾಯ್ಕ, ಗಂಗಾನಾಯ್ಕ, ಯಂಕಾನಾಯ್ಕ, ಜಯಾನಾಯ್ಕ, ಚಂದ್ರನಾಯ್ಕ, ರಮೇಶ್‍ನಾಯ್ಕ ಸೇರಿದಂತ ಬಂಜಾರ ಸಮಾಜದ ಅನೇಕ ಪ್ರಮುಖರು ಸೇವಾಲಾಲ್ ಮರಿಯಮ್ಮ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

