ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಅಧಿಕಾರಾವಧಿ ಮುಗಿಯುವುದಕ್ಕೆ ಬಂದಿತ್ತು. ಇದೀಗ ಬಿಜೆಪಿ ಅವರ ಅಧಿಕಾರ ಅವಧಿಯನ್ನು ಮುಂದಿನ ಲೋಕಸಭಾ ಚುನಾವಣೆಯ ತನಕ ವಿಸ್ತರಿಸಿದೆ. ಅಂದ್ರೆ 2024ರ ಲೋಕಸಭಾ ಚುನಾವಣೆಯ ತನಕ ಜೆಪಿ ನಡ್ಡಾ ಅವರೇ ಬಿಜೆಪಿಯ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಎರಡು ದಿನಗಳ ಕಾಲ ದೆಹಲಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 2024ರವರೆಗೆ ಅಧಿಕಾರವನ್ನು ವಿಸ್ತರಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ.
ಬಳಿಕ ಜೆಪಿ ನಡ್ಡಾ ಅವರ ಬಗ್ಗೆ ಮಾತನಾಡಿದ ಅಮಿತ್ ಶಾ, ಬಿಹಾರದಲ್ಲಿ ಜೆಪಿ ನಡ್ಡಾ ಅವರ ನಾಯಕತ್ವದಿಂದ ಅತಿ ಹೆಚ್ಚು ಬೆಳವಣಿಗೆ ಹೊಂದಿದ್ದೇವೆ. ಮಹರಾಷ್ಟ್ರದಲ್ಲಿ ಬಹುಮತ ಪಡೆದೆವು, ಉತ್ತರ ಪ್ರದೇಶದಲ್ಲೂ ಗೆದ್ದಿದೆ ಮತ್ತು ಪಶ್ಚಿಮ ಬಂಗಾಳದಲ್ಲಿ ನಮ್ಮ ಸಂಖ್ಯೆ ಹೆಚ್ಚಾಗಿದೆ. ಗುಜರಾತ್ ನಲ್ಲೂ ಗೆಲುವು ಸಾಧಿಸಿದ್ದೇವೆ. ಮೋದಿ ಹಾಗೂ ಜೆಪಿ ನಡ್ಡಾ ಅವರ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. 2014ರ ಚುನಾವಣೆಯಲ್ಲೂ 2019ಕ್ಕಿಂತ ಅತಿ ಹೆಚ್ಚು ಮತಗಳನ್ನು ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.