ಬಳ್ಳಾರಿ, ವಿಜಯನಗರಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗವಕಾಶ..!

suddionenews
1 Min Read

ಬಳ್ಳಾರಿ, ಕೊಪ್ಪಳ, ವಿಜಯನಗರ ಭಾಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅಕ್ಟೋಬರ್ 29 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ. ಅಭ್ಯರ್ಥಿಗಳು ಇ-ಮೇಲ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಾಳೆಯೇ ಕಡೆಯ ದಿನವಾಗಿರುವ ಕಾರಣ ಬೇಗ ಅರ್ಜಿ ಸಲ್ಲಿಕೆ ಮಾಡಬಹುದು.

ಅರ್ಜಿ ಸಲ್ಲಿಸುವವರು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು 45 ವರ್ಷ ಮೀರಿರಬಾರದು. ಜೊತೆಗೆ ಮೀಸಲಾತಿ ಅನುಸಾರವಾಗಿ ಅಭ್ಯರ್ಥಿಗಳ ವಯೋಮಿತಿಯನ್ನು ಸಡಿಲಿಕೆ ಮಾಡಲಾಗುತ್ತದೆ‌. ಹುದ್ದೆಗಳಿಗೆ ಅರ್ಜಿ ಹಾಕಲು ಯಾವುದೇ ತರದ ಶುಲ್ಕ ಇರುವುದಿಲ್ಲ. ವಯಸ್ಸಿನ ವಯೋಮಿತಿ ಇರುವವರು ಅರ್ಜಿ ಹಾಕಬಹುದು.

ಮಾಸಿಕ ವೇತನ 45 ಸಾವಿರ ಇರಲಿದೆ. ಬಳ್ಳಾರಿ, ಕೊಪ್ಪಳ, ವಿಜಯಪುರ ಭಾಗದಲ್ಲಿ ಕೆಲಸಗಳು ಖಾಲಿ ಇವೆ. ಕ್ವಾಲಿಫಿಕೇಷನ್, ಅನುಭವ, ಲಿಖಿತ ಪರೀಕ್ಷೆ, ಸಂದರ್ಶನದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಕೇಳಿರುವ ಅಗತ್ಯ ದಾಖಲೆಗಳಿಂದಿಗೆ, prckr.recruitment@gmail.com ಈ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕಾಗಿದೆ. ಸರ್ಕಾರಿ ಕೆಲಸಕ್ಕಾಗಿ ಸಾಕಷ್ಟು ವಿದ್ಯಾರ್ಥಿಗಳು ಶ್ರಮ ಹಾಕುತ್ತಾ ಇರುತ್ತಾರೆ. ಓದುತ್ತಾ ಇರುತ್ತಾರೆ. ಆದರೆ ಎಷ್ಟೋ ಜನಕ್ಕೆ ಕೆಲಸಗಳು ಸುಲಭದಲ್ಲಿ ಸಿಗುವುದೇ ಇಲ್ಲ. ಹೀಗಿರುವಾಗ ಬಳ್ಳಾರಿ ಭಾಗದ ವಿದ್ಯಾರ್ಥಿಗಳಿಗೆ ಈ ಅವಕಾಶ ಸಿಕ್ಕಿದ್ದು ನಾಳೆಯೇ ಅರ್ಜಿ ಹಾಕಿ, ಸರ್ಕಾರಿ ಕೆಲಸವನ್ನು ಪಡೆಯಲು ಶ್ರಮ ಹಾಕಿ ಓದಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *