ಜೂನಿಯರ್ ಆಫೀಸರ್/ ಬಿಸಿನೆಸ್ ಪ್ರೊಮೋಷನ್ ಆಫೀಸರ್ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದ ಯಾವುದೇ ಭಾಗದಲ್ಲಿ ಹುದ್ದೆಗೆ ನೇಮಿಸಬಹುದು. ನೇಮಕಾತಿ ಸಂದರ್ಭದಲ್ಲಿ ಆಯ್ಕೆಗೆ ಅವಕಾಶ ಕೊಡಲಾಗುವುದು.
ಸೌತ್ ಇಂಡಿಯನ್ ಬ್ಯಾಂಕ್ (ಎಸ್‌ಐಬಿ) ಜೂನಿಯರ್ ಆಫೀಸರ್/ ಬಿಸಿನೆಸ್ ಪ್ರೊಮೋಷನ್ ಆಫೀಸರ್ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
2026 ಫೆಬ್ರವರಿ 20ರಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. 2026 ಮಾರ್ಚ್ 02ರವರೆಗೆ ಅರ್ಜಿ ಸಲ್ಲಿಸಬಹುದು. ಗರಿಷ್ಟ ವಯಸ್ಸು 2026 ಜನವರಿ 31ರಂತೆ 30 ವರ್ಷಗಳು. ಆಯ್ಕೆಯಾದ ಅಭ್ಯರ್ಥಿಯನ್ನು ದೇಶದ ಯಾವುದೇ ಭಾಗದಲ್ಲಿ ಹುದ್ದೆಗೆ ನೇಮಿಸಬಹುದು. ನೇಮಕಾತಿ ಸಂದರ್ಭದಲ್ಲಿ ಆಯ್ಕೆಗೆ ಅವಕಾಶ ಕೊಡಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://recruit.southindianbank.bank.in/RDC/
ವಿದ್ಯಾರ್ಹತೆ ಮತ್ತು ಇತರ ಅರ್ಹತೆ
* ಅಭ್ಯರ್ಥಿಗಳು ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಉದ್ಯೋಗದ ಸ್ಥಳವು ಭಾರತದಾದ್ಯಂತ ಎಲ್ಲಿಯಾದರೂ ಇರುತ್ತದೆ.
* ಕೆಲಸದ ಅನುಭವ: ಬ್ಯಾಂಕ್/NBFCಗಳು/ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷಗಳ ಅನುಭವ.
ವಯೋಮಿತಿ
ವಯೋಮಿತಿಯ ಪ್ರಕಾರ 2026 ಜನವರಿ 31ರಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷವಾಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಲಭ್ಯವಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸೌತ್ ಇಂಡಿಯನ್ ಬ್ಯಾಂಕ್ ಎಸ್‌ಐಬಿ ಜೂನಿಯರ್ ಆಫೀಸರ್ ಹುದ್ದೆಯ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಪರೀಕ್ಷೆ ವಿವರ/ಆಯ್ಕೆ ಹೇಗೆ:
ಆನ್ಲೈನ್ ಪರೀಕ್ಷೆ
ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನ ಎದುರಿಸಲಿದ್ದಾರೆ.
ನಂತರ ದಾಖಲೆ ಪರಿಶೀಲನೆ ನಡೆಯಲಿದೆ.
ಅರ್ಜಿ ಶುಲ್ಕ
ಜನರಲ್/ ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ: 500 ರೂ.
ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ: 200 ರೂ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
ಹುದ್ದೆಗಳ ವಿವರ
ಜೂನಿಯರ್ ಆಫೀಸರ್/ ಬಿಸಿನೆಸ್ ಪ್ರೊಮೋಷನ್ ಆಫೀಸರ್
ಪ್ರಮುಖ ದಿನಾಂಕಗಳು
♦ಅಧಿಸೂಚನೆ ದಿನಾಂಕ: 20 ಫೆಬ್ರವರಿ 2026
♦ಆನ್ಲೈನ್ ಅರ್ಜಿ ಆರಂಭ: 20 ಫೆಬ್ರವರಿ 2026
♦ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2026
♦ಶುಲ್ಕ ಪಾವತಿಗೆ ಕೊನೆಯ ದಿನಾಂಕ: 02 ಮಾರ್ಚ್ 2026
♦ಪರೀಕ್ಷೆಯ ದಿನಾಂಕ: ನಂತರ ತಿಳಿಸಲಾಗುವುದು
♦ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು
♦ಫಲಿತಾಂಶದ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು
♦ವಿವರಗಳಿಗೆ ಅಭ್ಯರ್ಥಿಗಳು SIBಯ ಅಧಿಕೃತ ವೆಬ್ತಾಣದಲ್ಲಿ ಅಧಿಸೂಚನೆವನ್ನು ಪರೀಕ್ಷಿಸಿ ದೃಢಪಡಿಸಬಹುದು.




