in ,

JOB NEWS : ಚಿತ್ರದುರ್ಗದಲ್ಲಿ ಉದ್ಯೋಗ ಮೇಳ : ಜನವರಿ 25 ರಂದು ನೇಮಕಾತಿ ಸಂದರ್ಶನ

suddione whatsapp group join

 

ಮಾಹಿತಿ ಕೃಪೆ :
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜನವರಿ. 21) : ಖಾಸಗಿ ಕಂಪನಿಗಳಾದ ಮುತ್ತೂಟ್ ಫೈನಾನ್ಸ್, ಟೆಕ್ ಮಹೇಂದ್ರ ಚೆನೈ, ಸ್ವಂದನ ಸ್ಪೂರ್ತಿ ಪೈನಾನ್ಷಿಯಲ್ ಲಿ. ಮುಂತಾದ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಜನವರಿ 25 ರಂದು ಬೆಳೆಗ್ಗೆ 10 ರಿಂದ ಸಂಜೆ 3 ರವರಗೆ, ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ  ನೇರ ಸಂದರ್ಶನ ಏರ್ಪಡಿಸಿರುತ್ತಾರೆ.

ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಬಯೋಡಾಟಾ-04 ಪ್ರತಿ, ವಿದ್ಯಾರ್ಹತೆ ಪ್ರಮಾಣ ಪತ್ರಗಳು, ಫೋಟೋಸ್, ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಪಾಲ್ಗೊಳ್ಳಬಹುದಾಗಿದೆ, ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು ಹಾಗೂ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಐಟಿಐ. ಡಿಪ್ಲೊಮೋ. ಬಿ.ಎ. ಬಿ.ಕಾಂ. ಬಿ.ಎಸ್ಸಿ. ಬಿ.ಬಿ.ಎಂ ವಿದ್ಯಾರ್ಹತೆಯನ್ನು  ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9945587060, 7022459064, 8105619020 ಗೆ ಸಂಪರ್ಕಿಸಬೇಕೆಂದು ಉದ್ಯೋಗ ಮಿನಿಮಯ ಕಛೇರಿಯ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಪ್ರತಿ ಮಂಗಳವಾರದಂದು ಜಿಲ್ಲಾಧಿಕಾರಿಗಳಿಂದ ತಹಸಿಲ್ದಾರ್ ಕಚೇರಿಗೆ ಭೇಟಿ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ದೇವಸ್ಥಾನ ಉದ್ಘಾಟನೆಗೆ ಬಂದ ಸುಮಲತಾ : ವಿರೋಧಿಸಿ ಜಗಳಕ್ಕೆ‌ನಿಂತ ಕಾಂಗ್ರೆಸ್ ಕಾರ್ಯಕರ್ತರು..!