ಉದ್ಯೋಗ ಮಾಹಿತಿ : ಚಿತ್ರದುರ್ಗದ ರುಡ್‌ಸೆಟ್ ನಲ್ಲಿ ಉಚಿತ ತರಬೇತಿ

ಸುದ್ದಿಒನ್, ಚಿತ್ರದುರ್ಗ, ಜನವರಿ. 01 : ಸಾಕಷ್ಟು ಜನರಿಗೆ ಏನಾದರೊಂದು ಸ್ಚಂತ ಉದ್ಯೋಗ ಮಾಡಬೇಕೆಂಬ ಹಂಬಲವಿರುತ್ತೆ. ಆದರೆ ಅದಕ್ಕೆ ಪೂರಕವಾಗಿ ಬೇಕಾದ ತರಬೇತಿಯಾಗಲಿ ಅಥವಾ ಯಾವ ವ್ಯವಹಾರ ಮಾಡಬೇಕೆಂಬ ಐಡಿಯಾ ಆಗಲಿ ಅವರ ಬಳಿ ಇರೋದಿಲ್ಲ. ಅಂತಹವರಿಗಾಗಿ ಇದೀಗ ಚಿತ್ರದುರ್ಗದಲ್ಲಿ ಉದ್ಯೋಗ ತರಬೇತಿಯನ್ನು ಆರಂಭಿಸಲಾಗುತ್ತಿದೆ.


ರುಡ್‌ಸೆಟ್ ಈ ಉದ್ಯೋಗ ತರಬೇತಿಯನ್ನು ಆಯೋಜನೆ ಮಾಡಿದೆ. ನೇರ ಸ್ವಉದ್ಯೋಗ ತರಬೇತಿಗೆ ಚಿತ್ರದುರ್ಗದಲ್ಲಿ. ನಿರುದ್ಯೋಗಿ ಯುವಕ/ಯುವತಿಯರು ಅಥವಾ ಸ್ವಂತ ಉದ್ಯೋಗ ಮಾಡಬೇಕೆಂದುಕೊಂಡಿರುವವರು ಈ ಸ್ವ ಉದ್ಯೋಗ ತರಬೇತಿಗೆ ಸೇರಬಹುದು.‌ ಸ್ವ ಉದ್ಯೋಗ ಮಾಡಲು ರುಡ್‌ಸೆಟ್ ಸಂಸ್ಥೆ ಕಡೆಯಿಂದಾನೇ 13 ದಿನಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ಇದರಲ್ಲಿ ಜ್ಯೂಟ್ ಬ್ಯಾಗ್ ತಯಾರಿಕೆಯನ್ನು ಕಲಿಸಿ ಕೊಡುತ್ತಾರೆ.

3-1-2025ರಂದು ನೀವೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಇದು ಚಿತ್ರದುರ್ಗದಲ್ಲಿರುವ ರುಡ್‌ಸೆಟ್ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಮೊದಲು ಭಾಗಿಯಾಗಿ ಎಲ್ಲಾ ವಿವರಗಳನ್ನು ತಿಳಿದಕೊಳ್ಳಿ. ಈ ತರಬೇತಿಯಲ್ಲಿ ಭಾಗಿಯಾಗುವುದಕ್ಕೆ ಆಸಕ್ತಿರಿರುವ ಅಭ್ಯರ್ಥಿಗಳಿಗೆ ಈ ಅರ್ಹತೆ ಇರಲೇಬೇಕು.
* 19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.

* ಕನ್ನಡ ಓದು ಬರಹ ಬಲ್ಲವರಾಗಿರಬೇಕು.

* ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

* ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಫೋನ್/ಮೊಬೈಲ್ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ ದಿನಾಂಕ *03.01.2025* ರಂದು ಚಿತ್ರದುರ್ಗ ರುಡ್‌ಸೆಟ್ ಸಂಸ್ಥೆಯ ಕಛೇರಿಯಲ್ಲಿ ನೇರ ತರಬೇತಿಯಲ್ಲಿ ಭಾಗವಹಿಸಲು ಈ ಮೂಲಕ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618282445, 9449732805/ 08194- 223505

Leave a Reply

Your email address will not be published. Required fields are marked *

error: Content is protected !!