ಉದ್ಯೋಗ ಮೇಳಗಳಿಂದ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ದೂರೆಯುತ್ತಿದೆ : ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

2 Min Read

 

ವರದಿ ಮತ್ತು ಫೋಟೋ ಕೃಪೆ
                       ಸುರೇಶ್ ಪಟ್ಟಣ್,                         
ಮೊ : 87220 22817

ಚಿತ್ರದುರ್ಗ,(ಫೆ.11) :  ಪ್ರಸ್ತುತ ದಿನಗಳಲ್ಲಿ ಎಲ್ಲಾವನ್ನು ಖಾಸಗಿಕರಣ ಮಾಡುತ್ತಿರುವುದರಿಂದ ಮೀಸಲಾತಿಯಿಂದ ಉದ್ಯೋಗ ಪಡೆಯುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಅಂಕಗಳನ್ನು ಹೆಚ್ಚು ಮಾಡಿಕೊಳ್ಳುವುದರ ಜೊತೆಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಇದರಿಂದ ಅವಕಾಶಗಳು ತಮ್ಮತ್ತ ಹುಡುಕಿಕೊಂಡು ಬರಲಿವೆ ಎಂದು ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.

ನಗರದ ಕೆ.ಕೆ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಹಾಗೂ ಅನಿತ್ ಕುಮಾರ್ ಜಿ.ಎಸ್. ಅಭಿಮಾನಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಪಡೆದವರಿಗೆಲ್ಲಾ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟವಾಗಿರುವುದರಿಂದ ಯುವ ಪೀಳಿಗೆ ಸ್ವಂತ ಉದ್ಯೋಗವನ್ನು ಕೈಗೊಂಡು ಇತರರಿಗೂ ಉದ್ಯೋಗ ನೀಡುವಲ್ಲಿ ಮುಂದಾಗಬೇಕು ದೇಶದಲ್ಲಿ ಶೇಕಡ 60% ಯುವ ಜನತೆ ಇದ್ದು, ಹಿಂದೆ ರೈತ ದೇಶದ ಬೆನ್ನೆಲುಬು ಎನ್ನುತ್ತಿದ್ದರು.

ಆದರೆ ಇಂದು ಯುವಜನತೆಯೇ ದೇಶದ ಬೆನ್ನೆಲುಬು ಎನ್ನುವಂತಾಗಿದೆ. ಶಿಕ್ಷಣ ಪಡೆದ ಎಲ್ಲಾರಿಗೂ ಸರ್ಕಾರಿ ಉದ್ಯೋಗ ಸಿಗುವುದಿಲ್ಲ. ಸ್ವ ಉದ್ಯೋಗ ಕೈಗೊಳ್ಳಲೆಂದು ಸರ್ಕಾರಗಳು ಯುವಜನತೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆ ಮೂಲಕ ಸರ್ಕಾರದ ಸಹಾಯವನ್ನು ಪಡೆದು ಸ್ವಂತ ಉದ್ಯೋಗವನ್ನು ಕೈಗೊಳ್ಳುವುದರ ಜೊತೆಗೆ ಇತರರಿಗೂ ಉದ್ಯೋಗ ನೀಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.

ಚಿತ್ರದುರ್ಗ ಬಯಲು ಸೀಮೆ, ಬರ ಪ್ರದೇಶವಾಗಿದ್ದು, ಈ ರೀತಿಯಾದ ಅವಕಾಶಗಳು ಸಿಕ್ಕಾಗ ಅದರ ಸದುಪಯೋಗವನ್ನು ಮಾಡಬೇಕಿದೆ, ಕೆಲಸವನ್ನು ಹುಡುಕಿಕೊಂಡು ಹೋಗುವುದರ ಬದಲು ತಮ್ಮಲಿಗೆ ಕೆಲಸವನ್ನು ಹುಡುಕಿಕೊಂಡು ಬಂದಾಗ ಅದರ ಸದುಪಯೋಗವಾಗಬೇಕಿದೆ. ಉದ್ಯೋಗ ಮೇಳದಂತಹ ಕಾರ್ಯಕ್ರಮ ಹೆಚ್ಚಿನ ರೀತಿಯಲ್ಲಿ ನಡೆದಾಗ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ದೂರೆಯುತ್ತದೆ ಎಂದರು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ,  ಪ್ರಸ್ತುತ ದಿನಮಾನಗಳಲ್ಲಿ ಉದ್ಯೋಗ ಅರಸಿ ಯುವಜನತೆ ಬೇರೆ ಬೇರೆ ರಾಜ್ಯ, ದೇಶಗಳಿಗೆ ಹೋಗುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿಯೇ ವಿವಿಧ ಕಂಪನಿಗಳನ್ನು ಕರೆತಂದು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕಾರ್ಯವನ್ನು ಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಹಾಗೂ ಅನಿತ್ ಕುಮಾರ್ ಜಿ.ಎಸ್. ಅಭಿಮಾನಿ ಬಳಗವತಿಯಿಂದ ಮಾಡಲಾಗುತ್ತಿದೆ ಮೇಳದಲ್ಲಿ ಭಾಗವಹಿಸಿರುವ ಯುವಜನತೆ ತಮ್ಮಲ್ಲಿರುವ ಪ್ರತಿಭೆಯನ್ನು ತೋರುವ ಮೂಲಕ ಸೂಕ್ತ ಉದ್ಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಮೇಳದಲ್ಲಿ ಭಾಗವಹಿಸಿರುವ ಕಂಪನಿ ಮುಖ್ಯಸ್ಥರು ಯಾವುದೇ ತಾರತಮ್ಯ ಮಾಡದೆ, ಸೂಕ್ತ ಪ್ರತಿಭೆಗಳನ್ನು ಗುರುತಿಸಿ, ಅರ್ಹರಿಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದ ಅವರು, ಉದ್ಯೋಗ ಪಡೆದವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ನಿವೇದನ್ ನೆಂಪೆ, ಅನಿತ್ ಕುಮಾರ್ ಜಿ.ಎಸ್., ನಗರಸಭೆ ಸದಸ್ಯ ಶಶಿಕುಮಾರ್, ಡಾ.ಹೆಚ್.ಆರ್.ಮಂಜುನಾಥ್, ಲೇಪಾಕ್ಷ, ಸತೀಶ್, ಬಿಜೆಪಿ ಮುಖಂಡರಾದ ಜಿ.ಎಂ.ಸುರೇಶ್, ನರೇಂದ್ರನಾಥ್, ನಂದಿನಾಗರಾಜ್ ಮಹಿಳಾ ಘಟಕದ ಶೈಲಾಜ ರೆಡ್ಡಿ ಶ್ರೀಮತಿ ಚಂದ್ರಕಾ ಲೋಕನಾಥ್, ವಿಜಯಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *