ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಶಾಲೆಗೆ ಶೇ.100 ಫಲಿತಾಂಶ : ಮಕ್ಕಳಿಗೆ ಶುಭಕೋರಿದ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ

ಚಿತ್ರದುರ್ಗ, (ಮೇ.21) : ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಆರ್ ವಂದನ ಮತ್ತು ಐಶ್ವರ್ಯ ಅವರು 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಅವರು ಬಂಡ್ಲೋರಹಟ್ಟಿಯ ವಿದ್ಯಾರ್ಥಿಗಳ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಈ ಬಾರಿಯ ಫಲಿತಾಂಶದಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಾದ
ಆರ್‌.ವಂದನ 619 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.
ಉಳಿದಂತೆ ಆರ್‌.ಐಶ್ಚರ್ಯ 97.9, ಡಿ.ಎಸ್‌.ಧನ್ಯಶ್ರೀ 97.76 ಅಂಕಗಳಿಸಿದ್ದಾರೆ. ಈ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಗೌರವಿಸಿದರು.

ಜ್ಞಾನಪೂರ್ಣ ಶಾಲೆಗೆ ಶೇ.100 ಫಲಿತಾಂಶ 

ಪರೀಕ್ಷೆಗೆ ಹಾಜರಾದ 51 ವಿದ್ಯಾರ್ಥಿಗಳಲ್ಲಿ 38 ಅತ್ಯುನ್ನತ, 13 ಪ್ರಥಮ ಶ್ರೇಣಿಗಳಿಸುವ ಮೂಲಕ ಶೇ. 100 ರಷ್ಟು ಫಲಿತಾಂಶ ತಂದಿದ್ದಾರೆ.

ಕನ್ನಡದಲ್ಲಿ 4 ವಿದ್ಯಾರ್ಥಿಗಳು 125 ಕ್ಕೆ 125

ಆಂಗ್ಲ ಭಾಷೆಯಲ್ಲಿ 09 ವಿದ್ಯಾರ್ಥಿಗಳು 100 ಕ್ಕೆ 99 ಅಂಕಗಳನ್ನು,

ಹಿಂದಿ ಭಾಷೆಯಲ್ಲಿ 7 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ,

ಗಣಿತ ವಿಷಯದಲ್ಲಿ 02 ವಿದ್ಯಾರ್ಥಿಗಳು 100 ಕ್ಕೆ 99 ಅಂಕಗಳನ್ನು,

ವಿಜ್ಞಾನ ವಿಷಯದಲ್ಲಿ 02 ವಿದ್ಯಾರ್ಥಿಗಳು 100 ಕ್ಕೆ 98 ಅಂಕಗಳನ್ನು,

ಸಮಾಜ ವಿಜ್ಞಾನ 14 ವಿದಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಶಾಲೆಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಕೀರ್ತಿ ತಂದಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥ ಎನ್‌.ಎಲ್‌.ವೆಂಕಟೇಶ ರೆಡ್ಡಿ ಕಾರ್ಯದರ್ಶಿ ಸುಹಾಸಿನಿ ವೆಂಕಟೇಶ ರೆಡ್ಡಿಯವರು ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!