ಬೆಂಗಳೂರು: ಹಲಾಲ್ ಮಾಂಸದ ವಿರೋಧದ ಚರ್ಚೆ ಜೋರಾಗಿದೆ. ಇದನ್ನ ಆರ್ಥಿಕ ಜಿಹಾದ್ ಎಂದು ಬಿಜೆಪಿ ನಾಯಕ ಸಿ ಟಿ ರವಿ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹಲಾಲ್ ಕಟ್ ಬೋರ್ಡ್ ಇರುವಂತ ಹೊಟೇಲ್ ಗಳಲ್ಲಿಯೂ ಊಟಕ್ಕೆ ಹೋಗಬೇಡಿ ಎಂದು ಭಜರಂಗದಳದವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇತ್ತ ಬಿಜೆಪಿ ನಾಯಕ ಸಿಟಿ ರವಿ ಹಲಾಲ್ ವಿಚಾರವಾಗಿ ಬೆಂಬಲ ಸೂಚಿಸಿದ್ದಾರೆ. ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಳೋದಕ್ಕೆ ಅವರಿಗೆ ಎಷ್ಟು ರೈಟ್ಸ್ ಇದೆಯೋ, ಬಹಿಷ್ಕರಿಸಿ ಅಂತ ಹೇಳೋಕೆ ನಮಗೂ ರೈಟ್ಸ್ ಇದೆ. ಹಲಾಲ್ ಅಂದ್ರೆ ಏನು, ಮುಸ್ಲಿಂ ಧಾರ್ಮಿಕತೆ. ಅದನ್ನ ಎಲ್ಲರು ಒಪ್ಪಿಕೊಳ್ಳೋದಕ್ಕೆ ಆಗುತ್ತಾ..? ಸಾಮರಸ್ಯ ಹೇರೋದಕ್ಕೆ ಬರಲ್ಲ. ಒನ್ ವೇ ಅಲ್ಲ ಅದು ಟುವೇ. ಹಲಾಲ್ ಇಲ್ಲದ ಮಾಂಸವನ್ನ ಅವರು ತಿನ್ನೋದಕ್ಕೆ ರೆಡಿಯಾದ್ರೆ ಇವ್ರು ತಿಂತಾರೆ. ಬ್ರಿಟಿಷ್ ನವರು ಹಿಂದೆ ಇದ್ರು ಅಂತ ಇಟ್ಟುಕೊಂಡಿದ್ದೀವಾ, ಓಡಿಸಿಲ್ಲವಾ.. ಹಾಗೆ ಇದು ಕೂಡ. ಹಲಾಲ್ ಅನ್ನೋದು ಆರ್ಥಿಕ ಜಿಹಾದ್. ಮುಸಲ್ಮಾನರು ವ್ಯಾಪಾರ ಮಾಡಬಾರದು ಅನ್ನೋ ಕಾರಣಕ್ಕೆ ಹೇರಿದ್ದಾರೆ ಅಷ್ಟೇ. ಹಲಾಲ್ ಮಾಡಿದ್ದು ಅವರ ದೇವರಿಗೆ ಪ್ರಿಯ ಆದ್ರೆ ಅದು ನಮ್ಮ ದೇವರಿಗೆ ಎಂಜಲು ಒಪ್ಪಿಕೊಳ್ಳಬೇಕು ಅಂತ ಏನಿದೆ ರಿ. ಅದೊಂದು ಎಕಾನಮಿಕ್ ಜಿಹಾದ್ ಎಂದದ್ದಾರೆ.
ಅತ್ತ ಹಲಾಲ್ ಮಾಂಸದ ವಿರುದ್ಧ ಅಭಿಯಾನ ತೀವ್ರಗೊಂಡಿದೆ. ಈ ಹಿನ್ನೆಲೆ ಇಂದು ಕಾಳಿ ಸ್ವಾಮಿ ಜಟ್ಕಾ ಕಟ್ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಜಟ್ಕಾ ಕಟ್ ಅಂದ್ರೆ ದೇವರ ಸೇವೆಗೆ ಬಲಿ ಕೊಡುವಾಗ ಈ ರೀತಿ ಮಾಡುತ್ತಾರೆ. ಪೂಜೆ ಮಾಡಿ, ತೀರ್ಥ ಹಾಕಿ ಆಮೇಲೆ ಬಲಿ ಕೊಡಲಾಗುತ್ತೆ. ಹೀಗಾಗಿ ಈ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ.