ಜೆಟ್ ಲ್ಯಾಗ್ ಪಬ್ ಮಾಲೀಕ, ನಿರ್ಮಾಪಕ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..?

1 Min Read

 

ಇವತ್ತು ಬೆಳ್ಳಂ ಬೆಳಗ್ಗೆಯೇ ಸ್ಯಾಂಡಲ್ ವುಡ್ ಶಾಕ್ ಕಾದಿತ್ತು. ನಿರ್ಮಾಪಕ, ಉದ್ಯಮಿ, ಬಾಡಿ ಬಿಲ್ಡರ್ ಸೌಂದರ್ಯ ಜಗದೀಶ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದನ್ನ ಕೆಲವರು ಆತ್ಮಹತ್ಯೆ ಅಂದರೆ, ಇನ್ನು ಹಲವರು ಹಾರ್ಟ್ ಅಟ್ಯಾಕ್ ಅಂತ ಹೇಳುತ್ತಿದ್ದರು. ಆದರೆ ಈಗ ಡಿಸಿಪಿ ಕೂಡ ಇದು ಆತ್ಮಹತ್ಯೆ ಎಂಬುದನ್ನು ಕನ್ಫರ್ಮ್ ಮಾಡಿದ್ದಾರೆ.

ಈ ಬಗ್ಗೆ ಡಿಸಿಪಿ ಸೈಯ್ಯದ್ ಉಲ್ಲಾ ಅದಾವತ್ ಮಾತನಾಡಿ, ಬೆಳಗ್ಗೆ 9.45ಕ್ಕೆ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅವರ ಮಡದಿ ಈಗಾಗಲೇ ದೂರು ನೀಡಿದ್ದು, ಅವರು ಕೂಡ ಇದು ಆತ್ಮಹತ್ಯೆ ಎಂದೇ ತಿಳಿಸಿದ್ದಾರೆ‌. ಇತ್ತಿಚೆಗೆ‌ ಸೌಂದರ್ಯ ಜಗದೀಶ್ ಅವರು ಮಾನಸಿಕವಾಗಿ ತುಂಬಾ ನೊಂದಿದ್ದರಂತೆ. ಅತ್ತೆಯ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿದ್ದವರು. ಅವರ ನಿಧನದ ಬಳಿಕ ಕುಗ್ಗಿ ಹೋಗಿದ್ದರಂತೆ. ನಾವೂ ಕೇಸ್ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಜಗದೀಶ್‌ ಸ್ನೇಹಿತ ಶ್ರೇಯಸ್​ ಪ್ರತಿಕ್ರಿಯಿಸಿದ್ದಾರೆ. ಸೌಂದರ್ಯ ಜಗದೀಶ್ ಅವರಿಗೆ ಯಾವುದೇ ಆರೋಗ್ಯ ಸಂಬಂಧಿ ಕಾಯಿಲೆ ಇರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜ. ಕೂಡಲೇ ನಾವು ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದರು. ಈಗಲೇ ನಾವು ಏನು ಎಂಬುದನ್ನು ಹೇಳಲು ಆಗಲ್ಲ. ಹೃದಯಾಘಾತ ಆಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಬ್ಯಾಂಕ್​ ನೋಟಿಸ್​ಗೂ ಆತ್ಮಹತ್ಯೆಗೂ ಸಂಬಂಧ ಇಲ್ಲ ಎಂದಿದ್ದಾರೆ.

ಇನ್ನು ಇತ್ತಿಚೆಗೆ ಕಾಟೇರ ಸಿನಿಮಾ ಸಕ್ಸಸ್ ದಿನ ಜೆಟ್ ಲ್ಯಾಗ್ ನಲ್ಲಿ ಅವಧಿಗೂ ಮೀರಿ ದರ್ಶನ್ ಹಾಗೂ ಸ್ನೇಹಿತರು ಪಾರ್ಟಿ ಮಾಡಿದ್ದರು. ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಇಪ್ಪತ್ತೈದು ದಿನಗಳ ಕಾಲ ಬಾರ್ ಲೈಸೆನ್ಸ್ ರದ್ದುಗೊಳಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *