ಮಂಡ್ಯ: ಮಂಡ್ಯ, ರಾಮನಗರ ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಆದರೀಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮತ್ತೊಂದು ವಿಕೆಟ್ ಪತನವಾಗುತ್ತಿದೆ. ಜೆಡಿಎಸ್ ತೊರೆಯುತ್ತಿರುವ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿ ಮಾತನಾಡಿದ್ದು, ಹಣ ಇದ್ದವರಿಗೆ ಮಾತ್ರ ಜೆಡಿಎಸ್ ಟಿಕೆಟ್ ನೀಡುತ್ತೆ ಎಂದು ಬೇಸರ ಹೊರ ಹಾಕಿದ್ದಾರೆ.

ಜಯರಾಮ್ ಅವರಿಗೆ ನಿಮ್ಮ ಬಳಿ ಹಣವಿಲ್ಲ, ಟಿಕೆಟ್ ಬೇಡ ಅಂತಾನೇ ಹೇಳಿದರು. ರಾಮು ಅವರಿಗೆ ಅವರ್ಯಾರೋ ಗೊತ್ತಿಲ್ಲ. ಶ್ರೀಕಂಠೇಗೌಡರು ಕರೆದುಕೊಂಡು ಬಂದಿದ್ದಾರೆ ಅಂತ ಹೇಳಿದ್ದರು. ಅಂತವರಿಗೆ ಯಾಕೆ ಟಿಕೆಟ್ ಕೊಟ್ರಿ ಹಾಗಾದ್ರೆ. ಜಯರಾಮ್ ಅವರ ಬಳಿ ಹಣವಿಲ್ಲ. ಜಯರಾಮ್ ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಅಂತ ಹೇಳಿದ್ವಿ. ಆದರೂ ಅವರಿಗೆ ಬಿಟ್ಟು ಹಣ ಇದೆ ಅಂತ ರಾಮು ಅವರಿಗೆ ಟಿಕೆಟ್ ನೀಡಿದ್ದರು. ಹಾಗಾದ್ರೆ ರಾಮು ಅವರು ಎಷ್ಟು ಕೋಟಿ ಹಣ ತೋರಿಸಿದ್ದಾರೆ.

ಕುಮಾರಸ್ವಾಮಿ ಅವರೇ ಹೇಳಿದ್ದರು. ದೇವೇಗೌಡರೇ ಹೇಳಿದ್ದರು. ನಿಮ್ಮತ್ರ ಹಣ ಇಲ್ಲಪ್ಪ, ಚುನಾವಣೆ ಬೇಡಪ್ಪ ಎಂದು ಹೇಳಿದ್ದರು. ಹಾಗಾದರೆ ಹಣ ಇರುವವರಿಗೆ ತಾನೇ ಟಿಕೆಟ್ ಕೊಟ್ಟಿರುವುದು. ಹಣದ ಮೇಲೆಯೇ, ಬೇರೆ ಯಾವುದರ ಬಗ್ಗೆಯೂ ಚರ್ಚೆಯಿಲ್ಲ. ನಿನ್ನತ್ರ ಹಣ ಇಲ್ಲ ಬೇಡ. ಪಕ್ಷದ ಕಾರ್ಯಕರ್ತನಾಗಿ ಒಂದಿನ ಬಾವುಟ ಹಿಡಿಲಿಲ್ಲ, ಚುನಾವಣೆಯಲ್ಲಿ ಬಂದು ಕೆಲಸ ಮಾಡಲಿಲ್ಲ. ಅವನ್ಯಾರು ಎಂದು ನನಗೆ ಗೊತ್ತೆ ಇಲ್ಲ ಅಂತ ಮೊದಲಿಗೆ ಹೇಳಿದ್ದರು. ಅವರಿಗೆ ಟಿಕೆಟ್ ಹೇಗೆ ಕೊಟ್ರಿ..? ಯಾವ ಮಾನದಂಡಗಳ ಮೇಲೆ ಕೊಟ್ರಿ ಎಂಬುದನ್ನು ಹೇಳಬೇಕು ಅಲ್ವಾ ಎಂದು ಪ್ರಶ್ನಿಸಿದ್ದಾರೆ.


