ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಜೆಡಿಎಸ್ ಒತ್ತಾಯಿಸಿ ಧರಣಿ ನಡೆಸುತ್ತಿದೆ. ಸದನದಲ್ಲಿ ಧರಣಿ ನಡೆಸುತ್ತಿರುವುದಕ್ಕೆ ಸ್ಪೀಕರ್ ಮನವಿ ಮಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಧಣಿ ಹಿಂಪಡೆಯಲು ಸ್ಪೀಕರ್ ಮನವಿ ಮಾಡಿದ್ದಾರೆ. ಸದನದ ಹೊರಗೆ ಧರಣಿ ನಡೆಸಲು ಸ್ಪೀಕರ್ ಮನವಿ ಮಾಡಿದ್ದಾರೆ. ಸಂಧಾನ ಸಭೆ ಬಳಿಕ ಕಲಾಪ ಪುನರಾರಂಭ ಮಾಡಲಾಗುತ್ತದೆ ಎಂದಿದ್ದಾರೆ.
ಈ ವಿಚಾರಕ್ಕೆ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಸರ್ಕಾರ ಒಪ್ಪಿದ್ರೆ ಧರಣಿ ಹಿಂಪಡೆಯುತ್ತಾರೆ. ಸದನದಲ್ಲಿ ನಾನು 40% ಕಮಿಷನ್ ಬಗ್ಗೆ ಚರ್ಚೆ ಮಾಡಬೇಕು. ಈ ಬಗ್ಗೆ ನಾನು ಚರ್ಚೆ ಮಾಡಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇನ್ನು ಕುಮಾರಸ್ವಾಮಿ ಮಾತನಾಡಿ, ಇದು ಬಡಮಕ್ಕಳ ಜೀವನಕ್ಕೆ ಸಂಬಂಧಿಸಿದ್ದು, ಇದು ಅತ್ಯಂತ ಬೇಜವಾಬ್ದಾರಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ. ನೀವೂ ಯಾವುದರ ಮೂಲಕವಾದರೂ ತನಿಖೆಯನ್ನು ನಡೆಸಿ. ಸಿಬಿಐ ಮೂಲಕವಾದರೂ ನಡೆಸಿ, ಒಟ್ಟು ಬಿಎಂಎಸ್ ಕಾಲೇಜು ಟ್ರಸ್ಟ್ ಮತ್ತು ಜಮೀನು ಅಕ್ರಮದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.