ರಾಯಚೂರು: 2023ರ ಚುನಾವಣೆ ಹತ್ತಿರದಲ್ಲಿಯೇ ಇದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕ ರಾಜ್ಯದ ಚುನಾವಣೆ ಘೋಷಣೆಗೆ ಎಲ್ಲರು ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ರಾಜಕೀಯ ಪಕ್ಷಗಳು ಕಾರ್ಯಚಟುವಟಿಕೆಯಲ್ಲಿ ಗರಿಗೆದರಿವೆ.
ಚುನಾವಣೆ ಎಂದರೇನೆ ಜನರಿಗೆ ಒಂದಷ್ಟು ಭರವಸೆಗಳನ್ನು ಮೂಡಿಸುತ್ತಾರೆ. ಪ್ರಣಾಳಿಕೆಯ ಮೂಲಕ ಜನರನ್ನು ಸೆಳೆಯುವ ಪ್ರಯತ್ನಗಳಾಗುತ್ತವೆ. ಇದೀಗ ಜೆಡಿಎಸ್ ಕೆಲ ಸಮುದಾಯದವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ.
ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾಮ್ ನಾಡಗೌಡ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಪ್ರಮುಖ ಸಮಾಜಗಳ ನಾಲ್ಕೈದು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗುತ್ತೆ. ಈಗಾಗಲೇ ಈ ಬಗ್ಗೆ ಜೆಡಿಎಸ್ ನಲ್ಲಿ ತೀರ್ಮಾನ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಪ್ರಮುಖ ಸಮಾಜಕ್ಕೆ ಅವಕಾಶ ಕೊಟ್ಟಿರುವಂತೆ ಇಲ್ಲಿಯೂ ಕೊಡಲಾಗುವುದು ಎಂದಿದ್ದಾರೆ.