ಚನ್ನಪಟ್ಟಣದಲ್ಲಿ ಜೆಡಿಎಸ್ ಸಮೀಕ್ಷೆ‌: ನಿಖಿಲ್ ಗೆಲುವು ಅಷ್ಟು ಸುಲಭವಾ..?

suddionenews
1 Min Read

 

ಚನ್ನಪಟ್ಟಣ: ವಿಧಾನಸಭಾ ಕ್ಷೇತ್ರ ದಳಪತಿಗಳು ಹಾಗೂ ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದ್ದು, ಗೆಲುವಿಗಾಗಿ ಇಬ್ಬರು ಹೋರಾಟ ನಡೆಸುತ್ತಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಮಗನ ಗೆಲುವಿಗಾಗಿ ಸಾಕಷ್ಟು ರಣತಂತ್ರಗಳನ್ನೇ ರೂಪಿಸುತ್ತಿದ್ದಾರೆ. ಬಿಜೆಪಿಯ ಘಟಾನುಘಟಿ ನಾಯಕರು ಸಹ ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಿಖಿಲ್ ಗೆಲುವಿಗಾಗಿ ಮೈತದರಿ ಪಕ್ಷ ಬಹಳಷ್ಟು ಎಫರ್ಟ್ ಹಾಕುತ್ತಿದೆ. ಇದರ ನಡುವೆ ಜೆಡಿಎಸ್ ನಿಂದ ಚನ್ನಪಟ್ಟಣದಲ್ಲಿ ಸಮೀಕ್ಷೆಯೊಂದು ನಡೆದಿದೆ.

 

ಹಳೆಯ ಮೈಸೂರು ಭಾಗ ಸದ್ಯಕ್ಕೆ ದೇವೇಗೌಡರ ಕುಟುಂಬದ ಹಿಡಿತದಲ್ಲಿಯೇ ಇದೆ. ಶಾಸಕರಾಗಿ, ಸಂಸದರಾಗಿಯೂ ಕುಮಾರಸ್ವಾಮಿ ಆ ಭಾಗದಲ್ಲಿ ಗೆಲುವು ಕಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರಿಗೂ ಸಹ ಹಳೆ ಮೈಸೂರು ಭಾಗದಲ್ಲಿ ವಿಶೇಷ ಅಭಿಮಾನಿಗಳ ಬಳಗವಿದೆ. ಎರಡು ಬಾರೀ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿ ಅಗ್ನಿಪರೀಕ್ಷೆಗೆ ಚನ್ನಪಟ್ಟಣ ಅಖಾಡಕ್ಕೆ ಇಳಿದಿದ್ದಾರೆ. ಸಮೀಕ್ಷೆ ನಡೆಸಿರುವ ಪ್ರಕಾರ ಚನ್ನಪಟ್ಟಣದ ಜನತೆ ನಿಖಿಲ್ ಕುಮಾರಸ್ವಾಮಿ ಪರವಾಗಿಯೇ ಇದ್ದಾರೆ. ಎರಡು ಬಾರಿ ಸೋತಿದ್ದಾರಲ್ಲ ಎಂಬ ಅನುಕಂಪದ ಆಧಾರದ ಮೇಲೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನ ಮತ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಖಿಲ್ ಕುಮಾರಸ್ವಾಮಿ 2019ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ದರು. ಸುಲಮತಾ ಅಂಬರೀಶ್ ಎದುರಾಳಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 2023ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು‌. ಆ ವರ್ಷವೂ ನಿಖಿಲ್ ಅವರಿಗೆ ಜನ ಕೈಹಿಡಿಯಲಿಲ್ಲ. ಇದೀಗ ಮೂರನೇ ಬಾರಿ ಜನರ ಮುಂದೆ ನಿಂತು ಮತ ಕೇಳುತ್ತಿದ್ದಾರೆ.‌ ಈ ಬಾರಿ ಜನ ಆಶೀರ್ವಾದ ಮಾಡ್ತಾರಾ ಎಂಬುದನ್ನು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *