ಜೆಡಿಎಸ್ ಪಕ್ಷಕ್ಕೆ 25 ವರ್ಷ : ನ. 22 ರಂದು ಬೆಂಗಳೂರಿನಲ್ಲಿ ಬೆಳ್ಳಿ ಹಬ್ಬ : ಎಂ.ಜಯ್ಯಣ್ಣ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ. 19 : ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಉದಯವಾಗಿ 25 ವರ್ಷ ಸಂದಿದೆ. ಈ ಹಿನ್ನಲೆಯಲ್ಲಿ ನ. 22 ಶನಿವಾರದಂದು ರಾಜಧಾನಿ ಬೆಂಗಳೂರಿನ ಜೆ.ಪಿ.ಭವನದಲ್ಲಿ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಚಿತ್ರದುರ್ಗ ಜೆಡಿಎಸ್ ಜಲ್ಲಾಧ್ಯಕ್ಷರಾದ ಎಂ.ಜಯ್ಯಣ್ಣ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷ 25 ವರ್ಷವನ್ನು ಆಚರಣೆ ಮಾಡುವುದು ಅದು ಸುಲಭದ ಮಾತಲ್ಲ. ರಾಷ್ಟ್ರೀಯ ಪಕ್ಷ ನಡುವೆ ಹೊರಾಟವನ್ನು ಮಾಡುವುದರ ಮೂಲಕ ಚುನಾವಣೆಯಲ್ಲಿ ಅವರನ್ನು ಎದುರಿಸಲಾಗಿದೆ. ಹಲವಾರ ಪ್ರಾದೇಶಿಕ ಪಕ್ಷಗಳು ಪ್ರಾರಂಭವಾಗಿ ನೆಲವನ್ನು ಕಚ್ಚಿವೆ. ಅಂತಹುದರಲ್ಲಿ ಜೆಡಿಎಸ್ ಪಕ್ಷವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಪಕ್ಷವನ್ನು ರಾಜ್ಯದಲ್ಲಿ ಸಂಘಟಿಸಿದ್ದಾರೆ. ಈ ಹಿನ್ನಲೆಯಲ್ಲಿ ನ.22ರಂದು ಜೆ.ಪಿ ಭವನದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಇದರಲ್ಲಿ ಭಾಗವಹಿಸುವುದರ ಮೂಲಕ ದೇವೇಗೌಡರಿಗೆ ಬಲವನ್ನು ತುಂಬಬೇಕಿದೆ. ಕೇಂದ್ರದ ಸಚಿವರಾಗಿ ಕುಮಾರಸ್ವಾಮಿಯವರು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಜೀವಂತವಾಗಿ ಇಡುವ ಕಾರ್ಯವನ್ನು ಈ ಇಬ್ಬರು ನಾಯಕರು ಮಾಡುತ್ತಿದ್ದಾರೆ ಇವರಿಗೆ ನಾವೆಲ್ಲಾ ಸಾಥ್ ನೀಡಬೇಕಿದೆ ಎಂದರು.

ಪಕ್ಷದಲ್ಲಿ ಮಂದಿನ  ದಿನದಲ್ಲಿ ಚಟುವಟಿಕೆಗಳನ್ನು ಪ್ರಾರಂಭ ಮಾಡಬೇಕಿದೆ. ಪಕ್ಷದ ಸದಸ್ಯತ್ವ, ಪದಾಧಿಕಾರಿಗಳು ಸೇರಿ ಸಂಘಟನೆ, ಇದ್ದಲ್ಲದೆ ಮುಂದಿನ  ದಿನದಲ್ಲಿ ಬರುವಂತ ವಿವಿಧ ಚುನಾವಣೆಗಳಿಎಗ ತಯಾರಿಯನ್ನು ಮಾಡಿಕೊಳ್ಳಬೇಕಿದೆ, ನಮ್ಮದು ಈಗ ಎನ್.ಡಿ.ಎ ಮೃತ್ರಿ ಕೂಟವಾಗಿದೆ ಬಿಹಾರದಲ್ಲಿ ಅದಂತೆ 2028ರ ಚುನಾವಣೆಯಲ್ಲಿ ನಮ್ಮ ಮೈತ್ರಿ ಪಕ್ಷದ ಗೆಲುವು ಆಗಲಿದೆ ಎಂದು ಭವಿಷ್ಯ ನುಡಿದ ಅವರು, ಮುಂಬರುವ ಯಾವುದೇ ಚುನಾವಣೆ ಆದರೂ ಸಹಾ ಬಿಜೆಪಿ ಜೊತೆಯಲ್ಲಿ ಮೈತ್ರಿಯನ್ನುಮಾಡಿಕೊಂಡು ಚುನಾವಣೆಯನ್ನು ಎದುರಿಸಿ ಅಧಿಕಾರವನ್ನು ಹಿಡಿಯಲಾಗುವುದು ಎಂದು ತಿಳಿಸಿದ ಜಯ್ಯಣ್ಣ ನ. 22 ರಂದು ನಡೆಯುವ ಕಾರ್ಯಕ್ರಮಕ್ಕೆ ಚಿತ್ರದುರ್ಗ ಜಿಲ್ಲೆಯಿಂದ ಮುಖಂಡರುಗಳು ಸ್ವಯಂ ಆಗಿ ಭಾಗವಹಿಸುವಂತೆ ಮನವಿ ಮಾಡಿದರು.

ಜೆಡಿಎಸ್ ಮುಖಂಡರಾದ ರವೀಂದ್ರರವರು ಮಾತನಾಡಿ, ಪ್ರಾದೇಶಿಕ ಪಕ್ಷವನ್ನು 25 ವರ್ಷಗಳ ಕಾಲ ನಡೆಸಿಕೊಂಡು ಬರುವುದು ಸುಲಬದ ಮಾತಲ್ಲ, ಈ ಪಕ್ಷ ದೇಶಕ್ಕೆ ಪ್ರಧಾನ ಮಂತ್ರಿ ರಾಜ್ಯಕ್ಕೆ ಮುಖ್ಯಮಂತ್ರಿ ಗಳನ್ನು ನೀಡಿದ ಪಕ್ಷವಾಗಿದೆ. ಇದ್ದಲ್ಲದೆ ರೈತರ ಪರವಾಗಿ ಯಾವುದಾರರು ಪಕ್ಷ ಇದೆ ಅಂದರೆ ಅದು ಜೆಡಿಎಸ್ ಪಕ್ಷ ಮಾತ್ರ, ಪಕ್ಷ 25 ವರ್ಷಾಚರಣೆಯನ್ನು ಈಗ ಬೆಂಗಳೂರಿನಲ್ಲಿ ಆಚರಣೆ ಮಾಡಲಾಗುತ್ತಿದೆ ಮುಂದಿನ ದಿನದಲ್ಲಿ ಈ ಆಚರಣೆಯನ್ನು ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದಲ್ಲಿ ಆಚರಣೆ ಮಾಡಲಾಗುವುದು, ಈಘ ರಾಜ್ಯದಲ್ಲಿ  ಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಸರ್ಕಾರವಾಗಿದೆ. ಜನರ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಅಧಿಕಾರಕ್ಕಾಗಿ ಕಿತ್ತಾಟವನ್ನು ಮಾಡುತ್ತಿದ್ದಾರೆ ಎಂದರು.

ಪತ್ರಿಕಾ ಗೋಷ್ಟಿಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ಮಂಜುನಾಥ್, ಗಣೇಶ್, ಪರಮಶ್ವರಪ್ಪ, ಹನುಮಂತಪ್ಪ, ವಿರೇಶ್, ತಿಪ್ಪೇಸ್ವಾಮಿ, ಮಂಜಣ್ಣ, ಶಂಕರ್ ವೀರಭದ್ರಪ್ಪ, ರಮೇಶ್ ಕುಮಾರ್, ಶೇಖರ್ ಮೂರ್ತಿ, ಚಿದಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Enable Notifications OK No thanks