ಬೆಂಗಳೂರು: ವಿಧಾನಸಭಾ ಚುನಾವಣೆ ಇನ್ನು ದೂರು ಇದೆ. ಸದ್ಯ ಬಂದಿರುವ ರಾಜ್ಯಸಭಾ ಚುನಾವಣೆಗೇನೆ ಸಾಕಷ್ಟು ಕಸರತ್ತುಗಳು ನಡೆದಿವೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗಾಗಿ ಇದೀಗ ಜೆಡಿಎಸ್ ನಿಯೋಗ ಸಿದ್ದರಾಮಯ್ಯರ ಬಳಿ ತೆರಳಿದೆ. ಮನವಿಯನ್ನು ಮಾಡಿದೆ.
ಜೆಡಿಎಸ್ ಮುಖಂಡರಾದ ಟಿ ಎ ಶರವಣ ಮತ್ತು ಬಿ ಎಂ ಫಾರೂಕ್ ಇದ್ದ ನಿಯೋಗ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿಯನ್ನು ಮಾಡಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೂಡ ಈ ಬಗ್ಗೆ ಹೇಳಿದ್ದು, ಸಿದ್ದರಾಮಯ್ಯ ಅವರ ಬೆಂಬಲ ಸಿಗಬಹುದು. ಅವರಿಗೆ ನನ್ನ ಮೇಲೆ ವಿಶ್ವಾಸ ಇದೆ ಎಂದಿದ್ದಾರೆ.
ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಫಾರೂಕ್, ಏನು ಬೇಕಾದರೂ ಆಗಬಹುದು. ವಿಶ್ವಾಸವಿದೆ. ನಾವೂ ಪ್ರಯತ್ನ ಕೂಡ ಪಟ್ಟಿದ್ದೇವೆ. ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸುವುದಕ್ಕಾಗಿ ನಾವಿಬ್ಬರು ಸೇರಿದರೆ, ಏನಾದರೂ ವರ್ಕೌಟ್ ಮಾಡುವ ಉದ್ದೇಶದಿಂದ ನಾವುಹ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಟಿ ಎ ಶರವಣ ಮಾತನಾಡಿ, ರಾಜಕೀಯ ಎಂಬುದು ನಿಂತ ನೀರಲ್ಲ ಹರಿಯುವ ನೀರು. ಏನು ಬೇಕಾದರೂ ಬದಲಾವಣೆಯಾಗಬಹುದು. ಆ ವಿಶ್ವಾಸದಿಂದಲೇ ನಾವೀಲ್ಲಿ ಬಂದಿದ್ದೀವಿ. ಕಾಂಗ್ರೆಸ್ ಜೆಡಿಎಸ್ ಗೆ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.