in ,

ಕೋಲಾರ ಶ್ರೀನಿವಾಸ್ ಮತ್ತು ಗುಬ್ಬಿ ಶ್ರೀನಿವಾಸ್ ಅಮಾನತಿಗೆ ಜೆಡಿಎಸ್ ನಿಯೋಗ ದೂರು..!

suddione whatsapp group join

ಬೆಂಗಳೂರು: ಅಡ್ಡಮತದಾನ ಮಾಡಿದ ಇಬ್ಬರ ಮೇಲೆ ಜೆಡಿಎಸ್ ದೂರು ನೀಡಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರು ನೀಡಿದ್ದು, ಸ್ಪೀಕರ್‌ಗೆ 14 ಪುಟಗಳ ದೂರನ್ನು ನೀಡಿದೆ. ಕೋಲಾರ ಶ್ರೀನಿವಾಸ್, ಗುಬ್ಬಿ ಶ್ರೀನಿವಾಸ್ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುವಂತೆ ಜೆಡಿಎಸ್ ನಿಯೋಗ ದೂರು ನೀಡಿದೆ. ಜೆಡಿಎಸ್ ಹಿರಿಯ ನಾಯಕ ಹಾಗೂ ಶಾಸಕ ನಾಡಗೌಡ ಹಾಗೂ ಎಂಎಲ್ಸಿ ತಿಪ್ಪೇಸ್ವಾಮಿ ಅವರ ನಿಯೋಗದಿಂದ ದೂರು‌ ದಾಖಲಾಗಿದೆ.

ದೂರು ದಾಖಲಿಸಿದ ಬಳಿಕ ಮಾತನಾಡಿದ, ವೆಂಕಟರಾವ್ ನಾಡಗೌಡ, ಇಬ್ಬರು ಶಾಸಕರನ್ನ ಅನರ್ಹಗೊಳಿಸುವಂತೆ ದೂರು ನೀಡಿದ್ದೇವೆ. ಕಾಂಗ್ರೆಸ್ ಹೋಗೋದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಜೆಡಿಎಲ್‌ಪಿ ಸಭೆಗೂ ಆಗಮಿಸಿಲ್ಲ. ಅಲ್ಲದೆ ನಾನು ಕಾಂಗ್ರೆಸ್ ಪ್ರೀತಿಸ್ತೇನೆ ಅಂತ ಬಹಿರಂಗ ಹೇಳಿಕೆ ನೀಡಿದ್ದಾರೆ.

ಹೀಗಾಗಿ ನಾನು, ವಕೀಲ ರಂಗನಾಥ್ ಹಾಗೂ ತಿಪ್ಪೇಸ್ವಾಮಿ ಹೋಗಿ ದೂರು ನೀಡಿದ್ದೇವೆ. ಕ್ರಮ ಕೈಗೊಳ್ಳೋದಾಗಿ ಸ್ಪೀಕರ್ ಭರವಸೆ ನೀಡಿದ್ದಾರೆ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ನಾವು ಫೈಟ್ ಮಾಡಿದ್ದೇವೆ, ದೂರು ಕೊಟ್ಟಿದ್ದೇವೆ. ನಮಗೆ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಪಕ್ಷದ ತೀರ್ಮಾನ ದೂರು ಕೊಡಬೇಕು ಅಂತ. ಕುಮಾರಸ್ವಾಮಿ ಅವರು ಸಾಕಷ್ಟು ದೂರು ಕೊಟ್ರು ಏನೂ ಆಗಿಲ್ಲ ಅಂತ ಹೇಳಿದ್ದಾರೆ. ಆದ್ರೆ ದೂರು ಕೊಡೋದು ಪಕ್ಷದ ತೀರ್ಮಾನವೇ ಆಗಿದೆ.

 

ಕೆ.ಹೆಚ್ ಮುನಿಯಪ್ಪ ಪಕ್ಷ ಸೇರ್ಪಡೆ ವಿಚಾರ. ನೋಡಿ ಕಾದು ನೋಡಿ, ಯಾರೆಲ್ಲಾ ಬರ್ತಾರೆ ಅಂತ. ಅವರು ಹಿರಿಯ ರಾಜಕಾರಣಿ, ಅವರ ಪಕ್ಷದಲ್ಲಿ ಅವರಿಗೆ ಗೌರವವಿಲ್ಲ ಎಂದು ಮುನಿಯಪ್ಪ ಅವರೇ ಹೇಳಿದ್ದಾರೆ. ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ.

ಗುಬ್ಬಿ ಶ್ರೀನಿವಾಸ್ ಬಾಯಿಗೆ ಬಂದಂತೆ ಅಂದಿದ್ದಾರೆ. ನಂತರ ಅರಿತುಕೊಂಡು ಕ್ಷಮೆ ಕೇಳಿದ್ದಾರೆ. ಮೊನ್ನೆ ಕೂಡ ರಾಜಣ್ಣ ಇಂತದ್ದೇ ಕೆಟ್ಟ ಹೇಳಿಕೆ ದೇವೇಗೌಡರ ಮೇಲೆ ಮಾಡಿದ್ರು. ಅವರಿಗೂ ವಯಸ್ಸಾಗುತ್ತೆ. ದೇವೇಗೌಡರು ದೇವೇಗೌಡರೇ. ಅವರು ಈ ಮಣ್ಣಿನಿಂದ ಪ್ರಧಾನಿಯಾಗಿದ್ದವರು. ಮುಂದೆ ಯಾರು ಆಗ್ತಾರೋ ಇಲ್ಲವೋ ಗೊತ್ತಿಲ್ಲ. ನೋಡೋಣ ರಾಜಣ್ಣ ಅವರೂ ಹಾಗೆ ಇರ್ತಾರಾ.? ಪಕ್ಷದ ಬಗ್ಗೆ ಬೇಸರ ಇದ್ರೆ ಪಕ್ಷ ಬಿಟ್ಟು ಹೋಗಲಿ. ಅದು ಬಿಟ್ಟು ಈ ರೀತಿ ಕೆಟ್ಟದಾಗಿ ಹೇಳಬಾರದು.

 

ಈಗ ಕಾಂಗ್ರೆಸ್ ದೊಡ್ಡ ಪಕ್ಷ ಅಂತ ಹೋಗಿದಾರೆ. ಮುಂದೆ ಅವರ ಪರಿಸ್ಥಿತಿ ಏನಾಗುತ್ತೆ ನೋಡೋಣ. GT ದೇವೇಗೌಡರು ನಮ್ಮಲ್ಲೇ ಇರ್ತಾರೆ. ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಮಾಡ್ತೀವಿ. ಎಲ್ಲರಿಗೂ ನೋವಿದೆ, ಅವರ ಬಗ್ಗೆ ಗೌರವ ಕೂಡ ಇದೆ. ಅವರು ಮೊನ್ನೆ ರಾಜ್ಯಸಭೆ ಮತ ಕೂಡ ನಮ್ಮ ಅಭ್ಯರ್ಥಿಗೆ ಹಾಕಿದ್ದಾರೆ. ಅವರ ಮೇಲೆ ನಮಗೆ ವಿಶ್ವಾಸ ಇದೆ.

 

ಸಿದ್ದರಾಮಯ್ಯ ಗೆ ಇನ್ನೂ ಕ್ಷೇತ್ರವೇ ಸಿಗುತ್ತಿಲ್ಲ ಅನ್ನೋದು ಬಹಳ ದುಃಖದ ಸಂಗತಿ. ಎಷ್ಟು ಸಲ ಬಜೆಟ್ ಮಂಡನೆ ಮಾಡಿದವರು ಸಿದ್ದರಾಮಯ್ಯ. ಅಂತವರಿಗೆ ಇನ್ನೂ ಒಂದು ಕ್ಷೇತ್ರವೇ ಹುಡುಕಿಕೊಳ್ಳಲು ಆಗ್ತಿಲ್ವಲ್ಲ. ಚಾಮುಂಡೇಶ್ವರಿ ಸೋತ ಮೇಲೆ ಅಲ್ಲಿಂದ ಇಲ್ಲಿಗೆ ಓಡಬೇಕಾಯ್ತು. ಈಗ ನೋಡಿದರೆ ಬದಾಮಿ ದೂರ ಆಗತ್ತೆ ಅಂತಿದ್ದಾರೆ. ಯಾವಾಗಲೂ ಹೆಲಿಕಾಪ್ಟರ್ ನಲ್ಲಿ ಓಡಾಡುವವರು ಅವರು, ಅವರಿಗೆ ಯಾವ ದೂರ? ಎಂದು ವ್ಯಂಗ್ಯವಾಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ? ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ : ಡಿಕೆಶಿ

ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿ : ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹ