ಜೆಡಿಎಸ್ – ಬಿಜೆಪಿ ಸಮನ್ವಯ ಸಭೆಯಲ್ಲಿ ಯುವಕರದ್ದೇ ಆಕರ್ಷಣೆ : ಸಿದ್ದರಾಮಯ್ಯ ವಿರುದ್ಧ ಗುಡುಗಿದ ದೇವೇಗೌಡರು

suddionenews
1 Min Read

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಒಂದಾಗಿದ್ದು ಇಂದು ಸಮನ್ವಯ ಸಭೆ ನಡೆಸಿದ್ದಾರೆ. ಈ ದೊಡ್ಡಮಟ್ಟದ ಸಭೆಯಲ್ಲಿ ಮೈತ್ರಿ ಪಕ್ಷದಲ್ಲಿ ಎಷ್ಟು ಹೊಂದಾಣಿಕೆ ಇದೆ ಎಂಬುದನ್ನು ಸಾರಿದ್ದಾರೆ. ಈ ಮೂಲಕ ಅಸಮಾಧನವನ್ನು ಶಮನ ಮಾಡಿದ್ದು, ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ.

ಇನ್ನು ಈ ಸಭೆಯಲ್ಲಿ ಮಾಜಿ ಪ್ರಧಾನಿ ದೇಚೇಗೌಡ, ಬಿ ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆದರೆ ಈ ಸಭೆಯಲ್ಲಿ ಯುವಕರೇ ಹೆಚ್ಚು ಗಮನ ಸೆಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಯುವ ನಾಯಕರು ಕೈಕುಲುಕುತ್ತಾ ಒಟ್ಟಿಗೆ ಕಾಲ ಕಳೆದಿದ್ದರು.

ಇನ್ನು ಈ ವೇಳೆ ಹೆಚ್ಚು ಗಮನ ಸೆಳೆದಿದ್ದು, ನಿಖಿಲ್, ವಿಜಯೇಂದ್ರ ಹಾಗೂ ಪ್ರಜ್ವಲ್ ರೇವಣ್ಣ. ಮೂವರು ಯುವಕರು ಫೋಟೋಗೆ ಸಖತ್ ಪೋಸ್ ಕೊಟ್ಟಿರುವುದಲ್ಲದೆ, ಎರಡು ಪಕ್ಷಗಳ ಸಾಲನ್ನು ಮೂವರು ಧರಿಸಿದ್ದರು.

ಇದೆ ವೇಳೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಗರ್ವಭಂಗವಾಗಬೇಕು. ಗರ್ವ ಭಂಗ ಆಗಬೇಕಾದರೆ ನಾವೆಲ್ಲರು ಒಗ್ಗಟ್ಟಾಗಿ ಹೋಗಬೇಕು. ಎರಡು ಪಕ್ಷದಲ್ಲಿ ಸಮನ್ವಯ ಸಾಧಿಸಬೇಕು. ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪಾತ್ರ ಬಹಳ ಮುಖ್ಯವಾಗಿದೆ. ಹಿಂದೆ ಆದಂತಹ ವಿಚಾರಗಳನ್ನು ಮರೆತು ಎಲ್ಲರು ಒಂದಾಗಬೇಕು. ಕೇವಲ ಮೋದಿ ಹೆಸರು ಸಾಕಾಗುವುದಿಲ್ಲ. ಕಾರ್ಯಕರ್ತರೆಲ್ಲಾ ಸೇರಿ ಕೆಲಸ ಮಾಡಬೇಕಿದೆ.

 

ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಧಿಕಾರದ ಮದ ಏರಿದೆ. ಹೀಗಾಗಿ ಜೆಡಿಎಸ್ ಎಲ್ಲಿದೆ ಎಂದಿದ್ದಾರೆ. 90ರ ವಯಸ್ಸಿನಲ್ಲೂ ಜೆಡಿಎಸ್ ಎಲ್ಲಿದೆ ಅಂತಾರೆ. ಎಲ್ಲಿದೆ ಎಂಬುದನ್ನು ತೋರಿಸುವ ಸಾಮರ್ಥ್ಯ ನನಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *