ರಾಮನಗರ: ಹಾನಗಲ್ ಕ್ಷೇತ್ರದಲ್ಲಿ ಚುನಾವಣಾ ಬಿಸಿ ಏರಿದೆ. ಹಾನಗಲ್ ಕ್ಷೇತ್ರಕ್ಕೆ ಅದ್ಯಾವಾಗ ಚುನಾವಣಾ ದಿನಾಂಕ ನಿಗಧಿ ಆಯ್ತೋ ಅಂದಿನಿಂದಲೇ ಪಕ್ಷಗಳು ಆ್ಯಕ್ಟೀವ್ ಆಗಿವೆ.
ಇದೀಗ ರಾಷ್ಟ್ರೀಯ ಪಕ್ಷಗಳ ಮುನ್ನವೇ ಸ್ಥಳೀಯ ಪಕ್ಷ ಅಭ್ಯರ್ಥಿ ಘೋಷಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ಇನ್ನು ಅಭ್ಯರ್ಥಿಯನ್ನೇ ಘೋಷಿಸಿಲ್ಲ. ಆದ್ರೆ ಜೆಡಿಎಸ್ ಅದಾಗಲೇ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಜನತಾ ಪರ್ವ ಇಂದು ಕೂಡ ಬಿಡದಿಯಲ್ಲಿ ನಡೆಯುತ್ತಿದೆ. ಆ ಕಾರ್ಯಕ್ರಮದಲ್ಲಿ ಅಭ್ಯರ್ಥಿಯ ಘೋಷಣೆ ಮಾಡಿದ್ದಾರೆ. ನಿಯಾಜ್ ಶೇಕ್ ಎಂಬುವವರನ್ನು ಈ ಬಾರಿಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಿಯಾಜ್ ಗೆ ಕುಮಾರಸ್ವಾಮಿ ಬಿ ಫಾರಂ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಯನ್ನ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ.