ಮೈಸೂರು: ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮೈಸೂರಿನ ಬಸ್ ಸ್ಟಾಪ್ ಒಂದರ ಬಗ್ಗೆ ಸುದ್ದಿಯಾಗಿತ್ತು, ಚರ್ಚೆಗೆ ಗ್ರಾಸವಾಗಿತ್ತು. ಬಸ್ ಸ್ಟಾಪ್ ಮೇಲೆ ಗೋಲ್ ಗುಂಬಜ್ ಇದೆ ಎಂದು. ಈ ಬಗ್ಗೆ ಇಂದು ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದು, ಗೋಲ್ ಗುಂಬಜ್ ತೆಗೆಯದೆ ಹೋದಲ್ಲಿ ನಾನೇ ಜೆಸಿಬಿ ಕರೆಸಿ, ಕಿತ್ತಾಕಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟಿಪ್ಪು ನಿಜ ಕನಸುಗಳು ನಾಟಕ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಮೈಸೂರಿನ ಅಭಿವೃದ್ಧಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಬೇಕು. ಮಹಾರಾಜರು ಒಂದು ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ದಸರಾ, ಚಾಮುಂಡಿ ತಾಯಿಯ ಆಶೀರ್ವಾದ ಇದರ ಮೇಲೆಯೇ ಆಡಳಿತ ನಡೆಯಬೇಕು. ಇಲ್ಲಿ ಇರುವ ಎಲ್ಲಾ ಸಂಕೇತಗಳು ಚಾಮುಂಡಿ ತಾಯಿಯ ಭಕ್ತಿಯ ಧ್ಯೋತಕವಾಗಿರಬೇಕು. ಆದರೆ ಬಸ್ ಸ್ಟಾಪ್ ಮೇಲೆ ಗೋಲ್ ಬುಂಬಜ್ ಇದೆ.
ಕೆ ಆರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಸ್ ಸ್ಟಾಪ್ ನಲ್ಲಿ ಈ ಒಂದು ದೃಶ್ಯ ಕಂಡು ಬಂದಿದೆ. ಆ ಕಡೆ ಈ ಕಡೆ ಸಣ್ಣ ಗುಂಬಜ್ ಇದೆ. ನಡುವೆ ದೊಡ್ಡದೊಂದು ಗುಂಬಜ್ ಇದೆ. ಇದು ಮಸೀದಿಯ ಸಂಕೇತವೇ. ನಾನು ಇಂಜಿಯರ್ ಗಳಿಗೆ ಈಗಾಗಲೇ ಸೂಚನೆ ನೀಡಿದ್ದೀನಿ. ಆದಷ್ಟು ಬೇಗ ಅದನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾನೇ ಜೆಸಿಬಿ ತರಿಸಿ ಕೆಡವುತ್ತೇನೆ ಎಂದಿದ್ದಾರೆ.