ತುಮಕೂರು: ಕಾನೂನು ಸಚಿವ ಮಾಧುಸ್ವಾಮಿ ಎಂದಾಕ್ಷಣಾ ಆ ಗಟ್ಟಿ ಸ್ವಭಾವದ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತೆ. ಆದ್ರೆ ಅವರು ಜನರ ಮುಂದೆ ಎಮೋಷನಲ್ ಆಗ್ತಾರೆ, ಅವರ ಕಣ್ಣಲ್ಲೂ ನೀರು ಬರುತ್ತೆ ಅಂದ್ರೆ ನೀವೂ ನಂಬಲೇಬೇಕು. ಹಾಗಂತ ಇದು ಎಲೆಕ್ಷನ್ ವಿಚಾರಕ್ಕೋ ಅಥವಾ ಮತ್ತೊಂದಕ್ಕೋ ಅಲ್ಲ ಸಾಕಷ್ಟು ವರ್ಷಗಳ ಕನಸು ಸಾಕಾರಗೊಂಡ ಕ್ಷಣಕ್ಕೆ ಖುಷಿಗೆ ಬಂದ ಕಣ್ಣೀರು.
ಹೌದು, ಜಿಲ್ಲೆಯೆ ಚಿಕ್ಕನಾಯಕನಹಳ್ಳಿ ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಸುವ ಯೋಜನೆ ಸಾಕಾರಗೊಂಡಿದೆ. ಈ ಹಿನ್ನೆಲೆ ಇಂದು ಅವರ ಸ್ವಗ್ರಾಮ ಜೆ ಸಿ ಪುರದಲ್ಲಿ 121 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೊನ್ನೆ ಕೆರೆಯ ದಾರಿಯಲ್ಲಿ ಹೋಗ್ತಾ ಇದ್ದೆ. ಆಗ ಎದುರುಗಡೆ ಸಿಕ್ಕ ವೃದ್ದೆಯೊಬ್ಬಳು ಏನಪ್ಪ, ಅದ್ಯಾವ ಬಾಯಲ್ಲಿ ಕೆರೆಗಳಿಗೆಲ್ಲಾ ನೀರು ತಮಬಿಸುತ್ತೀನಿ ಅಂದ್ಯೋ. ಮಳೆ ಬಂದು ಕೆರೆಯೆಲ್ಲಾ ತುಂಬಿ ಹೋಗಿದೆ ಅಂದ್ರು. ಆ ತಾಯಿಯ ಮಾತು ಕೇಳಿ ನನಗೆ ತುಂಬಾ ಖುಷಿ ಆಯ್ತು.
ಆದ್ರೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು ಅಂದ್ರೆ ಅದು ಎತ್ತಿನ ಹೊಳೆ ಯೋಜನೆಯ ನೀರು ಹರಿಸಲೇಬೇಕು. ಇವತ್ತು ಆ ದಿನ ಕೂಡ ನನಸಾಗಿದೆ. ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೀನಿ ಅಂತ ಭಾವುಕರಾಗಿ ನುಡಿದರು. ಆ ವೇಳೆ ಕಣ್ಣಲ್ಲಿ ನೀರು ಸಹ ತುಂಬಿತ್ತು.