ಚಿತ್ರದುರ್ಗ. ಅ.31: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 9 ಮತ್ತು 11ನೇ ತರಗತಿಗೆ ಪ್ರವೇಶ ಪಡೆಯಲು ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಮಾನ್ಯತೆ ಪಡೆದ ಶಾಲೆಗಳ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ನವೆಂಬರ್ 7 ರವರೆಗೆ ವಿಸ್ತರಿಸಲಾಗಿದೆ.
https://cbseitms.nic.in/2023/nvsix/PrincipalLogin/getafflictionno
ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಿತ್ರದುರ್ಗ ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿರುವ ಸರ್ಕಾರ, ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 2023-24ರ ಶೈಕ್ಷಣಿಕ ಅವಧಿಯಲ್ಲಿ 8 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
9ನೇ ತರಗತಿಗೆ ಅರ್ಜಿ ಸಲ್ಲಿಸಲು 2009 ಮೇ 5 ರಿಂದ 2011ರ ಜುಲೈ 31 ರ ನಡುವೆ ಜನಿಸಿರಬೇಕು. 11ನೇ ತರಗತಿಗೆ ಅರ್ಜಿ ಸಲ್ಲಿಸಲು 2007ರ ಜೂನ್ 1 ರಿಂದ 2009ರ ಜುಲೈ 31 ರ ನಡುವೆ ಜನಿಸಿರಬೇಕು. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಯ್ಕೆ ಪರೀಕ್ಷೆಯು 2024ರ ಫೆಬ್ರವರಿ 10 ರಂದು ನಡೆಯಲಿದೆ.
8 ನೇ ತರಗತಿ ವಿದ್ಯಾರ್ಥಿಗಳಿಗೆ ಆಯ್ಕೆ ಪರೀಕ್ಷೆ: ಹಿಂದಿ, ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಓಎಂಆರ್ ಆಧಾರಿತ ವಸ್ತುನಿಷ್ಠ ಪ್ರಕಾರ ದ್ವಿಭಾಷಾ ಪತ್ರಿಕೆ (ಹಿಂದಿ ಮತ್ತು ಇಂಗ್ಲಿಷ್) ಪಠ್ಯಕ್ರಮ ಮತ್ತು ಆಯ್ಕೆಯ ಮಾನದಂಡಗಳಿಗಾಗಿ ಎನ್‍ವಿಎಸ್ ಅಧಿಸೂಚನೆಯನ್ನು ನೋಡಬಹುದು.
10ನೇ ತರಗತಿ ವಿದ್ಯಾರ್ಥಿಗಳಿಗೆ ಆಯ್ಕೆ ಪರೀಕ್ಷೆ: ಮಾನಸಿಕ ಸಾಮಥ್ರ್ಯ, ಇಂಗ್ಲಿಷ್ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಒಎಂಆರ್ ಆಧಾರಿತ ವಸ್ತುನಿಷ್ಠ ಪ್ರಕಾರ ದ್ವಿಭಾಷಾ ಪತ್ರಿಕೆ (ಹಿಂದಿ ಮತ್ತು ಇಂಗ್ಲಿಷ್) ಪಠ್ಯಕ್ರಮ ಮತ್ತು ಆಯ್ಕೆಯ ಮಾನದಂಡಗಳಿಗಾಗಿ ಎನ್‍ವಿಎಸ್ ಅಧಿಸೂಚನೆಯನ್ನು ನೋಡಬಹುದು.
10ನೇ ತರಗತಿ ಅಧ್ಯಯನದ ಜಿಲ್ಲೆ ಮತ್ತು ನಿವಾಸ ಒಂದೇ ಆಗಿದ್ದರೆ ಮಾತ್ರ ಅಭ್ಯರ್ಥಿಯನ್ನು ಜಿಲ್ಲಾ ಮಟ್ಟದ ಮೆರಿಟ್‍ಗೆ ಪರಿಗಣಿಸಲಾಗುತ್ತದೆ ಎಂದು ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.