Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಂಗಮರು ಎಲ್ಲರಿಗೂ ಆಶ್ರಯ ನೀಡುವ ಆಲದ ಮರ ಇದ್ದಂತೆ : ಡಾ|| ಶಿವಾನುಭವಚರವರ್ಯ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ‌ ಸ್ವಾಮೀಜಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 17 :  ಮಹಿಳೆಯರಿಗೆ ಮಾಂಗಲ್ಯ ಸರ ಎಷ್ಟು ಮುಖ್ಯವೇ ಅಷ್ಟೇ ಪ್ರಮಾಣದಲ್ಲಿ ಪುರುಷರಿಗೆ ದೇಹದ ಮೇಲೆ ಲಿಂಗ ಪ್ರತಿಷ್ಠಾಪನೆ ಅಗತ್ಯವಾಗಿದೆ. ಯುವ ಜನಾಂಗಕ್ಕೆ ಲಿಂಗ ದೀಕ್ಷೆಯನ್ನು ನೀಡುವುದರ ಮೂಲಕ ಮುಂದಿನ ದಿನಮಾನದಲ್ಲಿ ಉತ್ತಮವಾದ ಭವಿಷ್ಯವನ್ನು ಕಾಣಬಹುದಾಗಿದೆ ಎಂದು ನೂಣವಿನಕೆರೆಯ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠ ಮತ್ತು ತುರವೇಕೆರೆಯ ವಿರಕ್ತ ಮಠದ ಡಾ|| ಶಿವಾನುಭವಚರವರ್ಯ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಶ್ರೀಗಳು ತಿಳಿಸಿದರು.

ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬೇಡ ಜಂಗಮ ಸಮಾಜದವತಿಯಿಂದ ಹಮ್ಮಿಕೊಂಡಿದ್ದ ವೀರಶೈವ ವೀರಮಹೇಶ್ವರ ಜಂಗಮ ವಟುಗಳಿಗೆ ಉಚಿತ ಶ್ಯಾಸ್ರ್ತ್ರೋಕ್ತ ದೀಕ್ಷೆ ಹಾಗೂ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಬೇಡ ಜಂಗಮ ಸಮಾಜ ಪ್ರತಿ ವರ್ಷ ಈ ರೀತಿಯಾದ ದೀಕ್ಷಾ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಜಂಗಮ ಸಮಾಜವನ್ನು ಪ್ರಗತಿಯತ್ತ ಕೊಂಡ್ಯೂಯಲಾಗುತ್ತಿದೆ.

2013ರಲ್ಲಿ ಚಿತ್ರದುರ್ಗದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ರೀತಿಐಆದ ಕಾರ್ಯಕ್ರಮಗಳು ಇತ್ತೀಚಿನ ದಿನಮಾನದಲ್ಲಿ ಕಡಿಮೆಯಾಗಿದೆ, ಇವುಗಳು ಹೆಚ್ಚಾಗಬೇಕಿದೆ ಆಗ ಮಾತ್ರ ಜಂಗಮ ಸಮಾಜ ಹೆಚ್ಚಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಇಂದಿನ ದಿನಮಾನದಲ್ಲಿ ಲಿಂಗ ಪೂಜೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ, ಇದರಿಂದ ದೀಕ್ಷಾ ಪಟುಗಳಿಗೆ ಈ ರೀತಿಯಾದ ದೀಕ್ಷೆಯನ್ನು ನೀಡುವುದರ ಮೂಲಕ ಮುಂದಿನ ದಿನದಲ್ಲಿ ಉತ್ತಮ ಜಂಗಮರನ್ನಾಗಿ ಮಾಡಬಹುದಾಗಿದೆ. ವೀರಶೈವ ಪದ್ದತಿ ಜೀವಾತ್ಮಾತವಾಗಬೇಕಿದೆ. ವೇದ ಪಾಠಶಾಲೆಗಳನ್ನು ಪ್ರಾರಂಭ ಮಾಡುವುದರ ಮೂಲಕ ಜಂಗಮ ಸಮುದಾಯವನ್ನು ಮುನ್ನೆಡೆಸಬೇಕಿದೆ.

ಜಂಗಮರು ಸಂಘಟನೆಯಾಗಬೇಕಿದೆ. ಇವರು ಒಂದು ರೀತಿಯಲ್ಲಿ ಆಲದ ಮರ ಇದ್ದಂತೆ ಎಲ್ಲರಿಗೂ ಸಹಾ ಆಶ್ರಯವನ್ನು ನೀಡುತ್ತಾರೆ. ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರು ಕಾರುಣ್ಯ ಜಂಗಮದ ಮೂಲ ಮಂತ್ರವಾಗಿದೆ ಎಂದು ಶ್ರೀಗಳು ತಿಳಿಸಿದರು.

ವೀರಶೈವರಲ್ಲಿ ಜನನ ಮತ್ತು ಮರಣದಲ್ಲಿಯೂ ಸಹಾ ಜಂಗಮರ ಅಗತ್ಯ ಇದೆ. ಹುಟ್ಟುವಾಗಲೂ ಸಹಾ ಜಂಗಮರಿಲ್ಲದೆ ನಡೆಯುವುದಿಲ್ಲ ಅದೇ ರೀತಿ ಸಾವಿನಲ್ಲಿಯೂ ಸಹಾ ಜಂಗಮದ ಪಾದ ಇಲ್ಲದೆ ಪೂರ್ಣವಾಗುವುದಿಲ್ಲ, ಇದರಿಂದ ಜಂಗಮರ ಸ್ಥಾನ ಉನ್ನತವಾಗಿದೆ ಊರಿಗೆ ಓರ್ವ ಜಂಗಮನಿದ್ದರೆ ಊರೇ ಪಾವನವಾಗುತ್ತದೆ. ಎಲ್ಲರಿಗೂ ಉಪದೇಶವನ್ನು ನೀಡುವುದರ ಮೂಲಕ ಸಮಾಜವನ್ನು ಉದ್ದಾರ ಮಾಡುತ್ತಾರೆ ಎಂದು ಡಾ|| ಶಿವಾನುಭವಚರವರ್ಯ ಕರಿವೃಷಭದೇಶಿಕೇಂದ್ರ ಶಿವಯೋಗಿಶ್ವರ ಶ್ರೀಗಳು ತಿಳಿಸಿದರು.

ಕಾರ್ಯಕ್ರಮದ ಸಾನಿಧವ್ಯವನ್ನು ವಹಿಸಿದ್ದ ಮತ್ತೋರ್ವ ಶ್ರೀಗಳಾದ ರಟ್ಟೆಹಳ್ಳಿ ಕಭ್ಭಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಮ್ಮ ಆರ್ಶಿವಚನದಲ್ಲಿ, ಮಾನವನ ಬದುಕು ಧರ್ಮ ಸಂಸ್ಕಾರದಲ್ಲಿ ಹಾಸು ಹೊಕ್ಕಾಗ ಬೇಕಿದೆ, ಇಂದಿನ ದಿನಮಾನದಲ್ಲಿ ಭಗವಂತ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೂ ಸಹಾ ಪೂಜೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ, ನಮ್ಮೆಲ್ಲರ ಬದುಕಿನಲ್ಲಿ ಧರ್ಮ ಹಾಸು ಹೊಕ್ಕಾಗಿದೆ. ಧರ್ಮವನ್ನು ಬಿಟ್ಟು ಬದುಕಲಿಕ್ಕೆ ಸಾದ್ಯವಿಲ್ಲ, ಪ್ರತಿ ದಿನ ಸ್ನಾನ ಮಾಡಿ ಪೂಜೆಯನ್ನು ಮಾಡಿದ ನಂತರ ಪ್ರಸಾದವನ್ನು ಸ್ವೀಕಾರ ಮಾಡುವಮತೆ ಆಗಬೇಕಿದೆ ಆಗ ಮಾತ್ರ ಉತ್ತಮ ಸಂಸ್ಕಾರವನ್ನು ಹೊಂದಲು ಸಾಧ್ಯವಿದೆ ಎಂದರು.

ಮಾನವನಿಗೆ ಪಾರಮಾರ್ಥ ಮತ್ತು ಲೌಕಿಕ ಬದುಕ ಸಹಾ ಅಗತ್ಯವಾಗಿದೆ. ನಾವು ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣಬೇಕಿದೆ. ಮಾಡುವ ಕೆಲಸದಲ್ಲಿ ಆನಂದವನ್ನು ಕಾಣಬೇಕಿದೆ. ಇದರ ಮೂಲಕ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿದೆ. ಭಗವಂತನನ್ನು ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಳ್ಳಬೇಕಿದೆ ಆಗ ಆತ ಅಲ್ಲಿಂದ ಹೂರ ಹೋಗಲು ಸಾಧ್ಯವಿಲ್ಲ, ಜಂಗಮರಾದವರು ಬೇರೆಯವರ ಬದುಕಿಗೆ ಸಂಸ್ಕಾರವನ್ನು ನೀಡುವಂತ ಕಾರ್ಯವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಎಂ.ಟಿ.ಮಲ್ಲಿಕಾರ್ಜನಸ್ವಾಮಿ, ಬೇಡ ಜಂಗಮ ಸಮಾಜದ ಅಧ್ಯಕ್ಷರಾದ ಕೆ.ಎಂ.ವಿರೇಶ್, ಶಿವನಗೌಡ, ನಗರಸಭಾ ಸ್ಥಾಯಿ ಸಮಿತಿ ಅದ್ಯಕ್ಷರಾದ ಸುರೇಶ್, ಕೆ.ಸಿ.ರುದ್ರೇಶ್, ಕೆ.ಎನ್.ವಿಶ್ವನಾಥಯ್ಯ, ಚನ್ನಯ್ಯ ಶಶಿಧರ್ ಬಾಬು, ಕರಿಬಸಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ರೇವಣಸಿದ್ದಯ್ಯ ಮತ್ತು ಸಂಗಡಿಗರು ವೇದ ಘೋಷ ಮಾಡಿದರೆ ಕು.ಬಿಂದುಶ್ರೀ ಪ್ರಾರ್ಥಿಸಿದರೆ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಸ್ವಾಗತಿಸಿದರು, ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕರಾದ ಮಂಜುನಾಥ ವಂದಿಸಿದರು. ಸಿ.ಹೆಚ್.ಆಶಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ತಾಲ್ಲೂಕಿನ ವಿವಿಧ ಕಡೆಗಳಿಂದಾ ಅಗಮಿಸಿದ್ದ 28 ವಟುಗಳಿಗೆ ದೀಕ್ಷೆಯನ್ನು ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಶ್ಯಾಸ್ತ್ರೋಕ್ತ ದೀಕ್ಷೆಯನ್ನು ನೀಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!