ಬೆಂಗಳೂರು: ಜೂನ್ 10ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಸೋಲಿಸಲು ಕಾಂಗ್ರೆಸ್ ನ ಬೆಂಬಲ ಕೋರಿತ್ತು ಜೆಡಿಎಸ್. ಆದರೆ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ. ಎರಡನೇ ಅಭ್ಯರ್ಥಿಯನ್ನು ಹಾಕಿದ್ದಾರೆ. ಹೀಗಾಗಿ ಅಡ್ಡ ಮಯದಾನದ ಭಯ ಜೆಡಿಎಸ್ ಪಕ್ಷಕ್ಕೂ ಕಾಡುತ್ತಿದ್ದು, ಶಾಸಕರನ್ನು ರೆಸಾರ್ಟ್ ನಲ್ಲಿಟ್ಟು ಕಾಪಾಡುತ್ತಿದ್ದಾರೆ.
ಶಾಸಕ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಬಾಲಕೃಷ್ಣ, ಸುರೇಶ್ ಗೌಡ, ನಿಸರ್ಗ ನಾರಾಯಣಸ್ವಾಮಿ ಸೇರಿ ಕೆಲವು ಶಾಸಕರು ವಾಸ್ತವ್ಯ ಹೂಡಿದ್ದಾರೆ. ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನೆ ಗೆಲ್ಲಿಸಿಕಿಳ್ಳಲು ಪಕ್ಷದವರು ಮನವೊಲಿಕೆಯ ತಂತ್ರ ಬಳಸುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದು, ನಾಳೆ ಫಲಿತಾಂಶ ಕೂಡ ಬರಲಿದೆ.
ಅಸಮಾಧಾನಿತ ಶಾಸಕರಾದ ಜಿ ಟಿ ದೇವೆಗೌಡ, ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ ಇವರಿಗೂ ಕೂಡ ದೂರವಾಣಿ ಕರೆ ಮೂಲಕ ಹೊಟೇಲ್ ಗೆ ಬರುವಂತೆ ಸೂಚಿಸಿದ್ದಾರೆ. ಜೆಡಿಎಸ್ ನಾಯಕತ್ವದ ಬಗ್ಗೆ ಬೇಸರ ಮಾಡಿಕೊಂಡು, ಓಪನ್ ಆಗಿನೆ ಅಸಮಾಧಾನ ತೋಡಿಕೊಂಡಿದ್ದರು. ಇದೀಗ ನಾಯಕರ ಕರೆಗೆ ಹೂಗುಟ್ಟು ಹೊಟೇಲ್ ಗೆ ಬರುತ್ತಾರಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.